‘ವಿರಳ ಕಾಯಿಲೆಗಳನ್ನು ಎದುರಿಸುತ್ತಿರುವವರಿಗೆ ನಿರಂತರ ಚಿಕಿತ್ಸೆ ಹಾಗೂ ಔಷಧ ಅಗತ್ಯ. ಕೇಂದ್ರ ಆರೋಗ್ಯ ಸಚಿವಾಲಯ ಒದಗಿಸುತ್ತಿರುವ ₹50 ಲಕ್ಷವು ರೋಗಿಗೆ ಆರು ತಿಂಗಳಿಂದ ಒಂದು ವರ್ಷದವರೆಗೆ ಮಾತ್ರ ಸಾಕಾಗುತ್ತಿದೆ. ಸದ್ಯ ಕೇಂದ್ರದಲ್ಲಿ 300ಕ್ಕೂ ಅಧಿಕ ರೋಗಿಗಳಿಗೆ ಆರ್ಥಿಕ ನೆರವಿನಡಿ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ದಾನಿಗಳ ನೆರವು, ಕಾರ್ಪೊರೇಟ್ ದೇಣಿಗೆಯನ್ನೂ ಪಡೆದು ಚಿಕಿತ್ಸೆ ಒದಗಿಸಬೇಕಾದ ಪರಿಸ್ಥಿತಿಯಿದೆ. ರೋಗ ಹಾಗೂ ತೂಕದ ಮೇಲೆಯೂ ಚಿಕಿತ್ಸಾ ವೆಚ್ಚ ನಿರ್ಧಾರವಾಗುತ್ತದೆ. 10 ಕೆ.ಜಿ ಇರುವ ಮಗುವಿಗೆ ವಾರ್ಷಿಕ ₹30 ಲಕ್ಷ ಬೇಕಾಗುತ್ತದೆ. ಕೆಲವರಿಗೆ ₹1 ಕೋಟಿಯಿಂದ ₹5 ಕೋಟಿವರೆಗೂ ಅಗತ್ಯವಿರುತ್ತದೆ’ ಎಂದು ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ ಕೇಂದ್ರದ ಡಾ. ಮೀನಾಕ್ಷಿ ಭಟ್ ತಿಳಿಸಿದರು.