ಕೃತ್ಯದ ವೇಳೆ ಪವಿತ್ರಾಗೌಡ ವ್ಯವಸ್ಥಾಪಕ ಕೆ. ಪವನ್ ಫೋಟೊ ತೆಗೆದು ಅದನ್ನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ವಿನಯ್ ಹಾಗೂ ದರ್ಶನ್ ಆಪ್ತ, ಸಾಫ್ಟ್‌ವೇರ್ ಎಂಜಿನಿಯರ್ ಪ್ರದೂಷ್ ಅವರ ಐಫೋನ್‌ಗೆ ಕಳುಹಿಸಿದ್ದರು. ರೇಣುಕಸ್ವಾಮಿ ಮೃತಪಟ್ಟ ನಂತರ ಫೋಟೊ ಡಿಲೀಟ್ ಮಾಡಿ ಸಾಕ್ಷ್ಯ ನಾಶ ಪಡಿಸಿದ್ದರು. ದತ್ತಾಂಶ ಮರು ಸಂಗ್ರಹದ ವೇಳೆ ಆ ಫೋಟೊ ಲಭ್ಯ ಆಗಿವೆ.