ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವ್ಯಥೆ, ಕಣ್ಣೀರಿನ ಕತೆ: ಸೋಲೂರಿನಲ್ಲೊಂದು ಜಪ್ತಿ ವಾಹನಗಳ ‘ಮುಕ್ತಿ’ ತಾಣ

Last Updated 22 ಜನವರಿ 2020, 2:44 IST
ಅಕ್ಷರ ಗಾತ್ರ

ಬೆಂಗಳೂರು: ನೂರಾರು ಕಾರುಗಳು, ಟ್ರಕ್‌ಗಳು, ಟ್ರ್ಯಾಕ್ಟರ್‌ಗಳು, ಅವುಗಳನ್ನು ಕಾವಲು ಕಾಯುತ್ತಿರುವ ಸಿಸಿಟಿವಿ ಕ್ಯಾಮೆರಾಗಳು, ಸೆಕ್ಯುರಿಟಿ ಗಾರ್ಡ್‌ಗಳು. ನಾಳೆ ಯಾರೋ ಖರೀದಿಸಿ ಕೊಂಡೊಯ್ಯಲಿರುವ ಈ ವಾಹನಗಳು ಸಾಲ ತೀರಿಸಲಾಗದ ಕತೆ ಹೇಳುತ್ತಿವೆ.

ನೆಲಮಂಗಲ–ಕುಣಿಗಲ್‌ ಹೆದ್ದಾರಿಯಲ್ಲಿನ ಸೋಲೂರಿನಲ್ಲಿರುವ ಶ್ರೀರಾಮ್‌ ಅಟೊಮಾಲ್‌ ಇಂಡಿಯಾ ಲಿಮಿಟೆಡ್‌ (ಎಸ್‌ಎಎಂಐಎಲ್‌) ಸಂಸ್ಥೆಯ ಶೆಡ್‌ನಲ್ಲಿ ಕಂಡ ದೃಶ್ಯ ಇದು.

ರಾಜ್ಯದ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕುಗಳಲ್ಲಿ ದೀರ್ಘಾವಧಿ ಯೋಜನೆಯಡಿ ಸಾಲ ಪಡೆದು ರೈತರು ಖರೀದಿಸಿದ 4,122 ಟ್ರ್ಯಾಕ್ಟರ್‌ಗಳು ಹರಾಜಿಗೆ ಬಂದಿವೆ ಎಂಬ ಸುದ್ದಿಯಿಂದಾಗಿ ಜಪ್ತಿ ಮಾಡಿದ ವಾಹನಗಳ ಹರಾಜು ಹಾಕುವ ಶೆಡ್‌ಗಳೂಗಮನ ಸೆಳೆಯತೊಡಗಿವೆ.

ಆಟೊಮಾಲ್‌ನಲ್ಲಿ ಬಿಕರಿಗೆ ಕಾಯುತ್ತಿರುವ ಕಾರುಗಳು

ಇಲ್ಲಿಗೆ ತಂದ ವಾಹನಗಳನ್ನುಶ್ರೀರಾಮ್‌ ಅಟೊಮಾಲ್‌ ಸಂಸ್ಥೆ ನಿಗದಿತ ಸಮಯದ ಬಳಿಕ ಹರಾಜಿಗೆ ಹಾಕುತ್ತದೆ.ಮಧ್ಯವರ್ತಿ ಪಾತ್ರ ವಹಿಸುತ್ತಲೇ, ಹಣಕಾಸು ಸಂಸ್ಥೆಗಳು, ಬ್ಯಾಂಕುಗಳ ನಷ್ಟವನ್ನು ಒಂದಿಷ್ಟು ಹಗುರ ಮಾಡುತ್ತಿದೆ. ಜತೆಗೆ ಕಡಿಮೆ ಬೆಲೆಗೆ ವಾಹನ ಕೊಳ್ಳುವ ಗ್ರಾಹಕರಿಗೂ ಅನುಕೂಲ ಮಾಡುತ್ತಿದೆ.

‘ಇಲ್ಲಿಗೆ ತರುವ ವಾಹನಗಳಲ್ಲಿ ಕಾರುಗಳೇ ಅಧಿಕ ಪ್ರಮಾಣದಲ್ಲಿರುತ್ತವೆ. ನಾವು ಇಲ್ಲಿ ಶೆಡ್‌ನಂತೆ ಆಶ್ರಯ ನೀಡುವುದು, ಸ್ಥಳ ಬಾಡಿಗೆ ಪಡೆಯುವುದು, ಹರಾಜಿಗೆ ವ್ಯವಸ್ಥೆ ಮಾಡುವುದು ಬಿಟ್ಟರೆ ಬೇರೇನನ್ನೂ ಮಾಡುವುದಿಲ್ಲ. ವ್ಯವಹಾರವೆಲ್ಲವೂ ಹಣಕಾಸು ಸಂಸ್ಥೆಗಳು, ಖರೀದಿದಾರರಿಗೆ ಬಿಟ್ಟದ್ದು. ರೈತರೊಂದಿಗೆ ನಮಗೆ ನೇರ ಸಂಪರ್ಕವೇ ಇಲ್ಲ. ಹರಾಜಿಗೆ ಹಾಕುವಾಗಲೂ ಸಹ ಮೂಲ ಮಾಲೀಕರು ಮತ್ತೆ ಪಡೆಯುವುದಕ್ಕೆ ಆಸಕ್ತಿ ತೋರಿಸಿದರೆ ಅವರಿಗೇ ಅದನ್ನು ನೀಡಲಾಗುತ್ತದೆ, ನಗರಕ್ಕಿಂತಲೂ ಗ್ರಾಮೀಣ ಭಾಗಕ್ಕೇ ಈ ವಾಹನಗಳು ಹೋಗಬೇಕು ಎಂಬ ಆಶಯ ನಮ್ಮದು ಎಂದುಸಂಸ್ಥೆಯ ಸ್ಥಳೀಯ ಉಸ್ತುವಾರಿ ಕೆ.ಎಚ್‌.ಮಂಜುನಾಥ್‌ ತಿಳಿಸಿದರು.

ರೈತರು, ವಾಹನ ಮಾಲೀಕರು ಸೋತಿದ್ದರೆ ಅವರನ್ನು ಮತ್ತೆ ಹಿಂಡುವುದಿಲ್ಲ. ಅವರ ಋಣ ಭಾರ ಕಡಿಮೆ ಮಾಡುವ ಪ್ರಯತ್ನವಷ್ಟೇ ನಮ್ಮದು ಎನ್ನುತ್ತಾರೆಶ್ರೀರಾಮ್‌ ಅಟೊಮಾಲ್‌ನ ಸ್ಥಳೀಯ ಉಸ್ತುವಾರಿಕೆ.ಎಚ್‌.ಮಂಜುನಾಥ್‌.

ಅಂಕಿ – ಅಂಶಗಳು

45:ಇದುವರೆಗೆಹರಾಜಾಗಿರುವ ಟ್ರ್ಯಾಕ್ಟರ್‌ಗಳು

150:ಪ್ರತಿ ಗುರುವಾರ ಬಿಕರಿಯಾಗುವ ಕಾರುಗಳು

14:ಎಕರೆ ವಿಸ್ತೀರ್ಣದ ಆಟೊಮಾಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT