ಮನರೇಗಾ ಯೋಜನೆಯ ಹೆಸರು ಬದಲಿಸುವ ಪ್ರಧಾನಿ @narendramodi ಅವರ ಸರ್ಕಾರದ ನಿರ್ಧಾರವು ಮಹಾತ್ಮ ಗಾಂಧಿಯವರ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಇರುವ ದ್ವೇಷ - ಅಸೂಯೆಯನ್ನು ತೋರುತ್ತದೆ.
ವಿದೇಶಗಳಲ್ಲಿ ಗಾಂಧಿಯವರನ್ನು ಜಪಿಸುವ ಪ್ರಧಾನಿಗಳು ತಮ್ಮದೇ ದೇಶದಲ್ಲಿ ಗಾಂಧಿ ಹೆಸರಿಗೆ ಅಪಚಾರ ಮಾಡಲು ಹೊರಟಿರುವುದು ಖಂಡನೀಯ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕೇವಲ ಒಂದು ಕಲ್ಯಾಣ ಕಾರ್ಯಕ್ರಮವಲ್ಲ, ಇದು ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವೂ ಆಗಿದೆ. ಮಹಾತ್ಮ ಗಾಂಧಿಯವರ ಹೆಸರನ್ನು ಒಳಗೊಳ್ಳುವ ಮೂಲಕ ಈ ಯೋಜನೆಗೆ ನೈತಿಕ ಮೌಲ್ಯದ ಆಯಾಮವು ದೊರೆತಿದೆ.