2024ರಲ್ಲಿ ತೆರೆಕಂಡ ‘ಬಘೀರ’ ಸಿನಿಮಾ ಬಳಿಕ ನಟ ಶ್ರೀಮುರಳಿ ನಟನೆಯ ಸಿನಿಮಾಗಳಾವೂ ತೆರೆಕಂಡಿಲ್ಲ. ಸದ್ಯ ‘ಪರಾಕ್’ ಹಾಗೂ ‘ಉಗ್ರಾಯುಧಮ್’ ಎಂಬ ಎರಡು ಪ್ರಾಜೆಕ್ಟ್ಗಳಲ್ಲಿ ಶ್ರೀಮುರಳಿ ತೊಡಗಿಸಿಕೊಂಡಿದ್ದಾರೆ. ಬುಧವಾರ (ಡಿ.17) ಅವರ ಜನ್ಮದಿನದಂದು ‘ಉಗ್ರಾಯುಧಮ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

ಜನ್ಮದಿನಕ್ಕೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿತ್ತು. ‘ಎಲ್ಲವೂ ಸಿದ್ಧವಾಗಿತ್ತು. ಸಣ್ಣದೊಂದು ಅಹಿತಕರ ಘಟನೆಯ ಕಾರಣದಿಂದ ಮೋಷನ್ ಪೋಸ್ಟರ್ ಬಿಡುಗಡೆ ಮುಂದೂಡಿದ್ದೇವೆ. ಇದು ವೈಯಕ್ತಿಕ ಕಾರಣ. ಹೀಗಾಗಿ ನಾನು ಹೆಚ್ಚೇನೂ ಕೇಳಲಿಲ್ಲ. ಶೀಘ್ರದಲ್ಲೇ ಸಿನಿಮಾದ ವಿಡಿಯೊವೊಂದನ್ನು ರಿಲೀಸ್ ಮಾಡಲಿದ್ದೇವೆ’ ಎಂದಿದ್ದಾರೆ ಸಿನಿಮಾದ ನಿರ್ದೇಶಕ ಪುನೀತ್ ರುದ್ರನಾಗ್.

‘ಉಗ್ರಾಯುಧಮ್’ ಏಳುನೂರು ವರ್ಷಗಳ ಹಿಂದಿನ ಪಿರಿಯಾಡಿಕ್ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಚಿತ್ರಕ್ಕಾಗಿ ಸಕಲೇಶಪುರದ ಬಳಿ 135 ಎಕರೆಯಲ್ಲಿ ಅದ್ದೂರಿ ಸೆಟ್ ಹಾಕಲಾಗಿದ್ದು, ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ನಟ ರಾಜ್ಕುಮಾರ್ ಅಭಿಮಾನಿಯಾಗಿರುವ ಪುನೀತ್ ಅವರಿಗೆ ಈ ಸಿನಿಮಾ ಮಾಡಲು ರಾಜ್ಕುಮಾರ್ ಅವರ ಐತಿಹಾಸಿಕ ಸಿನಿಮಾಗಳೇ ಸ್ಫೂರ್ತಿ. ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
.ಬಿಗ್ಬಾಸ್ ಮನೆಯಲ್ಲಿ ಟ್ವಿಸ್ಟ್: ಎಲಿಮಿನೇಷನ್ನಿಂದ ಬಚಾವ್ ಆಗ್ತಾರಾ ಸ್ಪರ್ಧಿಗಳು?.Sandalwood: ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ಗೆ ಜೊತೆಯಾದ ಶ್ರೀಮುರಳಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.