‘ಸಿ.ಎಂ ಸ್ಥಾನ ಉಲ್ಲೇಖಿಸಿ ಹೇಳಿದ್ದಲ್ಲ’
‘ಯತೀಂದ್ರ ಅವರು ಸೈದ್ಧಾಂತಿಕವಾಗಿ ಸತೀಶ ಜಾರಕಿಹೊಳಿ ಹೆಸರು ಹೇಳಿ ದ್ದಾರೆ, ತಪ್ಪೇನಿದೆ? ಹಿಂದೆ ಅವರು ಅಹಿಂದ ಚಳವಳಿಯಲ್ಲಿ ಇದ್ದರು. ಅವರಿಗೆ ಬದ್ಧತೆ ಇದೆ ಎಂದು ಹೆಸರು ಹೇಳಿರಬಹುದು. ಮುಖ್ಯಮಂತ್ರಿ ಸ್ಥಾನ ಉಲ್ಲೇಖಿಸಿ ಆ ಹೇಳಿಕೆ ನೀಡಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ‘ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯನ್ನು ಹೈಕಮಾಂಡ್‌ನವರು ಕರೆಯುತ್ತಾರೆ. ಅಲ್ಲಿ ಶಾಸಕರ ಅಭಿಪ್ರಾಯ ಪಡೆದ ವೀಕ್ಷಕರು ಹೈಕಮಾಂಡ್ಗೆ ವರದಿ ಕೊಡುತ್ತಾರೆ. ಆ ನಂತರ ಯಾರು, ಏನು ಎನ್ನುವುದು ಘೋಷಿಸಲಾಗುತ್ತದೆ. ಇದು ನಮ್ಮಲ್ಲಿರುವ ಪದ್ಧತಿ’ ಎಂದರು.