ಬೆಂಗಳೂರು: ಕಾದಂಬರಿಕಾರ ಎಸ್.ಎಲ್. ಬೈರಪ್ಪ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ವ್ಯವಸ್ಥೆ ಮಾಡಲಾಗಿದೆ.

'ಪದ್ಮಭೂಷಣ', 'ಸರಸ್ವತಿ ಸಮ್ಮಾನ್' ಪುರಸ್ಕೃತ ಭೈರಪ್ಪ (94) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಯಾಘಾತದಿಂದ ನಿಧನರಾದರು.

ಪಾರ್ಥಿವ ಶರೀರವನ್ನು ಬೆಳಿಗ್ಗೆ 8.30ಕ್ಕೆ ವಿಶೇಷ ವಾಹನದಲ್ಲಿ ತರಲಾಯಿತು. ನಂತರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ.

ಸಚಿವರಾದ ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಡಾ.ಅಶ್ವಥ್ನಾರಾಯಣ, ಮುನಿರತ್ನ, ಶ್ರೀವತ್ಸ, ಕಲಾವಿದರಾದ ಶ್ರೀನಾಥ್, ಶ್ರೀಧರ್, ಬಿ.ಸಿ.ಪಾಟೀಲ, ಬಿ.ಜಯಶ್ರೀ, ಗಿರಿಜಾ ಲೋಕೇಶ್, ವೇ.ಕೆ.ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್, ನಗರ ಪೊಲೀಸ್ ಆಯುಕ್ತ ಸೀಮಂತಕುಮಾರ ಸಿಂಗ್ ಮತ್ತಿತರರು ನಮನ ಸಲ್ಲಿಸಿದರು.
.ಮೈಸೂರಿನಲ್ಲಿ ಎಸ್.ಎಲ್. ಭೈರಪ್ಪ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ.ಭೈರಪ್ಪ: ಯಶಸ್ಸಿನ ಮೆಟ್ಟಿಲುಗಳು.

ಕಣ್ಣೀರಿಟ್ಟ ಕಂಬಾರ

ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಬೈರಪ್ಪ ಅವರನ್ನು ನೆನೆದು ಕಣ್ಣೀರಿಟ್ಟರು. 'ನಾವಿಬ್ಬರೂ ಬಹಳ ವರ್ಷಗಳಿಂದ ಸ್ನೇಹಿತರು. ಅವರೊಂದಿಗೆ ಆತ್ಮೀಯತೆ ಇತ್ತು. ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸ್ಥಾನ ಪಡೆದವರು' ಎಂದು ನೆನಪಿಸಿಕೊಂಡರು.

.SL Bhyrappa: ಪ್ರಧಾನ ಗುರುದತ್ತರ ಕುವೆಂಪುನಗರದ ಮನೆಯಲ್ಲಿ ‘ಭೈರಪ್ಪ ಚೇರ್’.ಎಸ್.ಎಲ್. ಭೈರಪ್ಪ ನಿಧನ: ಮೈಸೂರಿನ ಗಣ್ಯರ ನುಡಿನಮನಗಳು ಇಲ್ಲಿವೆ...ಎಸ್.ಎಲ್. ಭೈರಪ್ಪ ನಿಧನ: ಮೈಸೂರಿನ ಗಣ್ಯರ ನುಡಿನಮನಗಳು ಇಲ್ಲಿವೆ...SL Bhyrappa | ಬಾನು ನೆನಪಿನಂಗಳದಲ್ಲಿ ಭೈರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.