ಬೆಂಗಳೂರು: ಸರ್ಕಾರದ ಅನುಮೋದನೆ ಇಲ್ಲದೆ ಪ್ರವೇಶ, ಸೀಟುಗಳ ಹೆಚ್ಚಳ ಮತ್ತು ಹೊಸ ಕೋರ್ಸ್‌ಗಳನ್ನು ಪರಿಚಯಿಸಿದ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಇಲಾಖೆ ₹4 ಲಕ್ಷ ದಂಡ ವಿಧಿಸಿದೆ.
ADVERTISEMENT
ADVERTISEMENT
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ರಚಿಸಿದ್ದ ತಜ್ಞರ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ, ಉನ್ನತ ಶಿಕ್ಷಣ ಇಲಾಖೆ ದಂಡ ವಿಧಿಸಿ, ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ಸರ್ಕಾರ ದಂಡ ವಿಧಿಸಿರುವುದು ಇದೇ ಮೊದಲು.
2023-24 ಮತ್ತು 2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿಶ್ವವಿದ್ಯಾಲಯ ನಿಯಮ ಉಲ್ಲಂಘಿಸಿ 500ಕ್ಕೂ ಹೆಚ್ಚು ಸೀಟುಗಳನ್ನು ಭರ್ತಿ ಮಾಡಿದೆ. ಸರ್ಕಾರದ ಅನುಮೋದನೆ ಇಲ್ಲದೆ 20ಕ್ಕೂ ಹೆಚ್ಚು ಹೊಸ ಪದವಿ ಕೋರ್ಸ್‌ಗಳನ್ನು ಪರಿಚಯಿಸಿತ್ತು.
ವಿಶ್ವವಿದ್ಯಾನಿಲಯದಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ನಿಯಮದ ಪ್ರಕಾರ ಶೇ 60 ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ನೀಡಬೇಕು. ಈ ನಿಯಮವನ್ನೂ ಪಾಲಿಸಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಯಾವುದೇ ಹೊಸ ಕಾರ್ಯಕ್ರಮಗಳಿಗೆ ಸರ್ಕಾರ ಅನುಮೋದನೆ ನೀಡಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.