ಬೆಂಗಳೂರು: ‘ರಾಜ್ಯದಲ್ಲಿ ಗಣಿ ಸಚಿವರು ಯಾರು ಎಂದು ಗೊತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಗಣಿಗಾರಿಕೆಗಳಿಂದ ಲೂಟಿಯಾಗುತ್ತಿದೆ. ಸರ್ಕಾರಕ್ಕೆ ರಾಜಸ್ವ ನಷ್ಟವಾಗುತ್ತಿದೆ’ ಎಂದು ಬಿಜೆಪಿ ಉಚ್ಚಾಟಿತ ಸದಸ್ಯ ಎಸ್.ಟಿ. ಸೋಮಶೇಖರ್ ಪ್ರಶ್ನಿಸಿದರು.

ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಸ್ವತ್ತಿನ ಜಪ್ತಿಗಾಗಿ ವಸೂಲಿ ಆಯುಕ್ತರನ್ನು ನೇಮಿಸುವ ಉದ್ದೇಶದಿಂದ ರೂಪಿಸಿದ ಮಸೂದೆಯನ್ನು ಗಣಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪರ ಕಾನೂನು ಸಚಿವ ಎಚ್. ಕೆ . ಪಾಟೀಲ ಮಂಡಿಸಿದರು.

ಆಗ ಮಾತನಾಡಿದ ಸೋಮಶೇಖರ್, ‘ಈ ಬಗ್ಗೆ ಕಳೆದ ಅಧಿವೇಶನದಲ್ಲೂ ಪ್ರಸ್ತಾಪ ಮಾಡಿದ್ದೆ. ತನಿಖೆ ಮಾಡುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ಭರವಸೆ ನೀಡಿತ್ತು. ಅದ್ಯಾವುದೂ ಆಗಿಲ್ಲ. ಈ ರೀತಿಯ ಲೂಟಿಗಳನ್ನು ಮೊದಲು ನಿಲ್ಲಿಸಿ. ಹೊಸ ಕಾಯ್ದೆ, ಕಾನೂನುಗಳು ಬರೀ ಬೋಗಸ್’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.