ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ಹೆಚ್ಚುವರಿಯಾಗಿ ₹10 ಕೋಟಿ, ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟದ ಸಭೆಯ ವೆಚ್ಚಕ್ಕಾಗಿ ಹೆಚ್ಚುವರಿಯಾಗಿ ₹3.69 ಕೋಟಿ ಅನುದಾನ ಸೇರಿ ₹3,352.57 ಕೋಟಿ ಮೊತ್ತದ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಮುಖ್ಯಮಂತ್ರಿ ಪರವಾಗಿ ಗೃಹ ಸಚಿವ ಜಿ.ಪರಮೇಶ್ವರ ಅವರು ಬುಧವಾರ ಪೂರಕ ಅಂದಾಜುಗಳ ಮೊದಲನೇ ಕಂತನ್ನು ಮಂಡಿಸಿದರು.

ಮುಖ್ಯಾಂಶಗಳು

* ಕಪಿಲ್ ಸಿಬಲ್ ಮತ್ತು ಇತರ ವಿಶೇಷ ವಕೀಲರ ಸಂಭಾವನೆ ಪಾವತಿಗೆ ಹೆಚ್ಚುವರಿಯಾಗಿ ₹2.30 ಕೋಟಿ, ಕೇರಳದಲ್ಲಿ ಪ್ರವಾಹ ಸಂತ್ರಸ್ತರಿಗೆ 100 ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡಲು ಹೆಚ್ಚುವರಿಯಾಗಿ ₹10 ಕೋಟಿ

* ಶಾಸಕರು ಕಾರುಗಳನ್ನು ಖರೀದಿಸಲು ಮುಂಗಡ ಮಂಜೂರು ಮಾಡಲು ಹೆಚ್ಚುವರಿಯಾಗಿ ₹3.20 ಕೋಟಿ, ವಿಧಾನಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕರು ಹೊಸ ವಾಹನ ಖರೀದಿಸಲು ಹೆಚ್ಚುವರಿಯಾಗಿ ₹31 ಲಕ್ಷ ಮತ್ತು ವಿರೋಧ ಪಕ್ಷ ನಾಯಕರ ಬಳಕೆಗೆ ಹೊಸ ವಾಹನ ಖರೀದಿಸಲು ಹೆಚ್ಚುವರಿಯಾಗಿ ₹30 ಲಕ್ಷ

* ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಮಾಧ್ಯಮ ಕೋಶದ ಹೊರಗುತ್ತಿಗೆ ಸಿಬ್ಬಂದಿ ವೇತನ ಪಾವತಿಗೆ ಹೆಚ್ಚುವರಿಯಾಗಿ ₹32.90 ಲಕ್ಷ

* ಬೆಂಗಳೂರಿನ ಕೆ.ಆರ್.ಪುರದಲ್ಲಿ ಕೆಎಸ್ಆರ್ಟಿಸಿ ಸಂಸ್ಥೆ ಭಾರತೀಯ ದೂರಸಂಪರ್ಕ ಉದ್ಯಮಕ್ಕೆ ಸೇರಿದ ಜಮೀನು ಖರೀದಿಸಲು ಬಡ್ಡಿ ರಹಿತ ಸಾಲ ಒದಗಿಸಲು ಹೆಚ್ಚುವರಿಯಾಗಿ ₹47 ಕೋಟಿ

* ಕೇರಳದ ವಯನಾಡು ಜಿಲ್ಲೆ ಮೆಪ್ಪಾಡಿಯಲ್ಲಿ ಉಂಟಾದ ಭೂಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಎಸ್ಡಿಆರ್ಎಫ್ ಹೆಚ್ಚುವರಿಯಾಗಿ ₹10.56 ಕೋಟಿ

* ಮೈಶುಗರ್ಸ್ ಸಕ್ಕರೆ ಕಂಪನಿಗೆ 2025–26 ನೇ ಸಾಲಿನ ಹಂಗಾಮಿಗೆ ಕಬ್ಬು ಅರೆಯಲು ಅಗತ್ಯವಿರುವ ದುಡಿಯುವ ಬಂಡವಾಳಕ್ಕಾಗಿ ಹೆಚ್ಚುವರಿಯಾಗಿ ₹10 ಕೋಟಿ

* ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಡಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ನಿವೇಶನ ಖರೀದಿಗೆ ₹1 ಕೋಟಿ ಹೆಚ್ಚುವರಿ ಅನುದಾನ

* ಬೆಂಗಳೂರಿನಲ್ಲಿ ನಡೆಯಲಿರುವ 11 ನೇ ಕಾಮನ್ವೆಲ್ತ್ ಸಂಸದೀಯ ಸಂಘದ ಭಾರತ ವಿಭಾಗದ ಸಮ್ಮೇಳನ ವೆಚ್ಚಗಳಿಗಾಗಿ ಹೆಚ್ಚುವರಿಯಾಗಿ ₹10 ಕೋಟಿ

* ವಿಧಾನಪರಿಷತ್ ಸಚಿವಾಲಯದ ಅಧಿಕಾರಿ– ಸಿಬ್ಬಂದಿ ಪ್ರಯಾಣ ವೆಚ್ಚ ಪಾವತಿಸಲು ₹1.31 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.