ನವದೆಹಲಿ: ಬೆಂಗಳೂರಿನಲ್ಲಿ ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ 10ರ ಬದಲು 16 ಅಂತಸ್ತು ನಿರ್ಮಿಸಿಕೊಳ್ಳುವ ಪ್ರೀಮಿಯಂ ಎಫ್ಎಆರ್ಗೆ (ಫ್ಲೋರ್ ಏರಿಯಾ ರೇಷೊ) ಅನುಮತಿಸುವ ಕರ್ನಾಟಕ ಸರ್ಕಾರದ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದ ವಿಚಾರಣೆ ವೇಳೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರ ಪೀಠವು, ‘ರಾಜ್ಯ ಸರ್ಕಾರದ ನಿರ್ಧಾರವು ಬೆಂಗಳೂರಿನ ಅನೇಕ ಕಿರಿದಾದ 9 ಮೀಟರ್ ಅಗಲದ ರಸ್ತೆಗಳಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಕಾರಣವಾಗಬಹುದು. ಇದು ಬೆಳೆಯುತ್ತಿರುವ ಟೆಕ್-ಸಿಟಿಯಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಿಸಲಿದೆ‘ ಎಂದು ಕಳವಳ ವ್ಯಕ್ತಪಡಿಸಿದೆ.

‘ಪಿಎಫ್ಎಆರ್ಗೆ ಅವಕಾಶ ನೀಡಿರುವುದರಿಂದ ಇಕ್ಕಟ್ಟಿನ ರಸ್ತೆಗಳಲ್ಲಿ ಇನ್ನಷ್ಟು ಬಹುಮಹಡಿ ಕಟ್ಟಡಗಳು ನಿರ್ಮಾಣವಾಗಲಿವೆ. ಬಿಲ್ಡರ್ಗಳು ಫ್ಲ್ಯಾಟ್ಗಳನ್ನು ಜನರಿಗೆ ಮಾರಿ ಕೈ ತೊಳೆದುಕೊಳ್ಳುತ್ತಾರೆ. ಹೊಸದಾಗಿ ಅಭಿವೃದ್ಧಿ ಹೊಂದಿರುವ ಪ್ರದೇಶಗಳಲ್ಲಿ ಪಿಎಫ್ಎಆರ್ಗೆ ಅನುಮತಿ ನೀಡುವುದನ್ನು ಒಪ್ಪಬಹುದು. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಹಳೆಯ ವಸತಿ ಪ್ರದೇಶದಲ್ಲಿ ಮತ್ತಷ್ಟು ಬಹುಮಹಡಿ ಕಟ್ಟಡಗಳು ನಿರ್ಮಾಣವಾದರೆ ಸಮಸ್ಯೆ ಇನ್ನಷ್ಟು ಉಲ್ಭಣವಾಗಲಿದೆ’ ಎಂದು ಪೀಠ ಎಚ್ಚರಿಸಿದೆ.

‘ನಾಗರಿಕರ ಹಿತದೃಷ್ಟಿ ಗಮನಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕೇ ಹೊರತು ಬಿಲ್ಡರ್ಗಳ ಅನುಕೂಲಕ್ಕಾಗಿ ಅಲ್ಲ. ತಮ್ಮ ಹಕ್ಕುಗಳ ಸಂರಕ್ಷಣೆಗಾಗಿ ನಾಗರಿಕರು ಪ್ರತಿ ಸಲ ಬೀದಿಗಿಳಿದು ಪ್ರತಿಭಟನೆ ನಡೆಸಬೇಕೇ’ ಎಂದು ಪೀಠ ಪ್ರಶ್ನಿಸಿದೆ.

ಭೂ ಮಾಲೀಕರು, ಅಭಿವೃದ್ಧಿದಾರರು ಮತ್ತು ನಿರ್ಮಾಣದಾರರು ಪಿಎಫ್ಎಆರ್ ಅನ್ನು ಬಳಸಿಕೊಳ್ಳಲು ನಿವೇಶನದ ಮಾರ್ಗಸೂಚಿಯ ಶೇ 28ರಷ್ಟು ಶುಲ್ಕ ಪಾವತಿಸಬೇಕು.

‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ –2015’ರ ಸೆಕ್ಷನ್ 13–ಇಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿತ್ತು. ಪ್ರೀಮಿಯಂ ಎಫ್ಎಆರ್ಗಾಗಿ ಪರಿಷ್ಕೃತ ಮಾಸ್ಟರ್ ಪ್ಲಾನ್–2015ರ ವಲಯ ನಿಯಮಗಳಿಗೆ 11 ಅನ್ನು (ಪಿಎಫ್ಎಆರ್ ಅನುಮತಿಸಲು ಶುಲ್ಕಗಳ ವಿವರ) ಸೇರ್ಪಡೆ ಮಾಡಲಾಗಿತ್ತು. 2025ರ ಜನವರಿ 4ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಏಪ್ರಿಲ್ 4ರಂದು ಅಂತಿಮ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಹೊರಡಿಸಿತ್ತು. ಆದರೆ, ನ್ಯಾಯಾಲಯದಲ್ಲಿ ಅದಕ್ಕೆ ತಡೆಯಾಗಿತ್ತು. ದಾವೆಯನ್ನು ಹೈಕೋರ್ಟ್ ಡಿ.5ರಂದು ವಜಾಗೊಳಿಸಿತ್ತು.

ಕಟ್ಟಡ ನಿರ್ಮಿಸುವವರು ನಿವೇಶನದ ಎದುರಿನ ರಸ್ತೆಯ ಆಧಾರದಲ್ಲಿ ಪಿಎಫ್ಎಆರ್ ಪಡೆದುಕೊಳ್ಳಬಹುದು. ಇದರ ಜೊತೆಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನೂ (ಟಿಡಿಆರ್/ ಡಿಸಿಆರ್) ಬಳಸಿಕೊಂಡು ಇನ್ನಷ್ಟು ಹೆಚ್ಚಿನ ಅಂತಸ್ತುಗಳನ್ನು ನಿರ್ಮಿಸಬಹುದಾಗಿದೆ. ನಿವೇಶನದ ವಿಸ್ತೀರ್ಣದ ಮೇರೆಗೆ ಟಿಡಿಆರ್, ಪಿಎಫ್ಎಆರ್ ನಿಗದಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.