ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಇಟಿ ಫಲಿತಾಂಶ: 64,830 ವಿದ್ಯಾರ್ಥಿಗಳು ಅರ್ಹ

Published 23 ನವೆಂಬರ್ 2023, 15:53 IST
Last Updated 23 ನವೆಂಬರ್ 2023, 15:53 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) 2023ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಪತ್ರಿಕೆಗಳಿಂದ ಪರೀಕ್ಷೆಗೆ ಹಾಜರಾದ 3.01 ಲಕ್ಷ ವಿದ್ಯಾರ್ಥಿಗಳಲ್ಲಿ 64,830 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪರೀಕ್ಷೆ ನಡೆಸಲಾಗಿತ್ತು. ಪತ್ರಿಕೆ–1ರಲ್ಲಿ ಪರೀಕ್ಷೆ ಬರೆದಿದ್ದ (1ರಿಂದ 5ನೇ ತರಗತಿಯ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು) 1.27 ಲಕ್ಷ ಅಭ್ಯರ್ಥಿಗಳಲ್ಲಿ 14,922 ಹಾಗೂ ಪತ್ರಿಕೆ–2ರಲ್ಲಿ ಪರೀಕ್ಷೆ ಬರೆದಿದ್ದ (6ರಿಂದ 8ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು) 1.74 ಲಕ್ಷ ಅಭ್ಯರ್ಥಿಗಳಲ್ಲಿ 49,908 ಮಂದಿ ಅರ್ಹತೆ ಪಡೆದಿದ್ದಾರೆ.

ಮಹಿಳೆಯರೇ ಅಧಿಕ:

ಪತ್ರಿಕೆ–1ರಲ್ಲಿ 4,139 ಪುರುಷರು, 10,783 ಮಹಿಳೆಯರು ಹಾಗೂ ಪತ್ರಿಕೆ–2ರಲ್ಲಿ 16,268 ಪುರುಷರು, 33,634 ಮಹಿಳೆಯರು ಹಾಗೂ 6 ಲಿಂಗತ್ವ ಅಲ್ಪಸಂಖ್ಯಾತರು ಅರ್ಹತೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT