ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಅಧಿಕಾರಿಗಳಿಂದಲೇ ಪ್ರಜ್ವಲ್ ರೇವಣ್ಣ ಬಂಧನ: ಇದು ಮಹಿಳಾ ಶಕ್ತಿ ಎಂದ ಎಸ್‌ಐಟಿ

Published 31 ಮೇ 2024, 9:07 IST
Last Updated 31 ಮೇ 2024, 9:07 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ತಡರಾತ್ರಿ ಬಂದಿಳಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಮಹಿಳಾ ಅಧಿಕಾರಿಗಳೇ ಬಂಧಿಸಿ ಜೀಪಿನಲ್ಲಿ ಕಚೇರಿಗೆ ಕರೆತಂದಿದ್ದು, ‘ಮಹಿಳೆಯರಿಗೆ ಬಂಧಿಸುವ ಅಧಿಕಾರವೂ ಇದೆ’ ಎಂಬ ಕಠಿಣ ಸಂದೇಶ ರವಾನಿಸಿದ್ದಾರೆ.

ಜರ್ಮನಿಯ ಮ್ಯೂನಿಕ್‌ ನಗರದಿಂದ ಬೆಂಗಳೂರಿಗೆ ಪ್ರಜ್ವಲ್ ಬರುತ್ತಿದ್ದ ಮಾಹಿತಿ ತಿಳಿದಿದ್ದ ಎಸ್‌ಐಟಿ ಅಧಿಕಾರಿಗಳು, ಬಂಧನಕ್ಕೆಂದು ಮಹಿಳಾ ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ. ಪೆನ್ನೇಕರ್ ಹಾಗೂ ಸೀಮಾ ಲಾಟ್ಕರ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಮಹಿಳಾ ಸಿಬ್ಬಂದಿಯನ್ನೇ ತಂಡಕ್ಕೆ ನಿಯೋಜಿಸಲಾಗಿತ್ತು.

ಗುರುವಾರ ತಡರಾತ್ರಿ 12.50 ಗಂಟೆ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಇದೇ ಸಂದರ್ಭದಲ್ಲಿ ವಿಮಾನದೊಳಗೆ ಹೋಗಿದ್ದ ಭದ್ರತಾ ಸಿಬ್ಬಂದಿ, ಪ್ರಜ್ವಲ್ ರೇವಣ್ಣ ಅವರನ್ನು ಅಲ್ಲಿಯೇ ವಶಕ್ಕೆ ಪಡೆದು ಹೊರಗೆ ಕರೆತಂದರು. ವಲಸೆ ಅಧಿಕಾರಿಗಳೂ ಜೊತೆಗಿದ್ದರು. ನಿರ್ಗಮನ ಗೇಟ್‌ನಲ್ಲಿದ್ದ ಸುಮನ್ ಪೆನ್ನೇಕರ್ ನೇತೃತ್ವದ ತಂಡ, ಪ್ರಜ್ವಲ್ ಅವರಿಗೆ ವಾರಂಟ್ ತೋರಿಸಿ ವಶಕ್ಕೆ ಪಡೆದರು.

ಪೊಲೀಸ್‌ ಜೀಪಿನಲ್ಲಿ ಪ್ರಜ್ವಲ್ ಅವರನ್ನು ಕೂರಿಸಲಾಗಿತ್ತು. ಅಕ್ಕ–ಪಕ್ಕ ಹಾಗೂ ಹಿಂದೆ–ಮುಂದೆ ಮಹಿಳಾ ಅಧಿಕಾರಿಗಳಿದ್ದರು. ವಿಮಾನ ನಿಲ್ದಾಣದಿಂದ ಹೊರಟ ಜೀಪು, ಸಿಐಡಿ ಕಟ್ಟಡದಲ್ಲಿರುವ ಎಸ್‌ಐಟಿ ಕಚೇರಿಗೆ ಬಂದು ತಲುಪಿತು. ಮಹಿಳಾ ಅಧಿಕಾರಿಗಳೇ, ಜೀಪಿನಿಂದ ಇಳಿದ ಪ್ರಜ್ವಲ್‌ನನ್ನು ಸೆಲ್‌ಗೆ ಕರೆದೊಯ್ದು ಒಳಗೆ ಹಾಕಿದರು.

ಮಹಿಳೆಯರ ಶಕ್ತಿ ತೋರಿಸಿದ್ದೇವೆ: ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾ ಚಾರ ಪ್ರಕರಣದ ಸಂತ್ರಸ್ತರ ಗೋಳು ನೋಡಿದ್ದೇವೆ. ಅವರು ಪಟ್ಟ ಕಷ್ಟಕ್ಕೆ ಮರುಗಿದ್ದೇವೆ. ಪ್ರಕರಣ ದಾಖಲಾಗು ತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ಗೆ ಮಹಿಳೆಯರ ಶಕ್ತಿ ತೋರಿಸಬೇಕಿತ್ತು. ಹೀಗಾಗಿ, ಮಹಿಳಾ ಅಧಿಕಾರಿಗಳ ತಂಡದಿಂದಲೇ ಬಂಧಿಸಿ ಜೀಪಿನಲ್ಲಿ ಕರೆತಂದಿದ್ದೇವೆ’ ಎಂದು ಎಸ್‌ಐಟಿಯ ಮೂಲಗಳು ಹೇಳಿವೆ.

‘ಹಲವು ಆಮಿಷವೊಡ್ಡಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಇದೀಗ,  ಮಹಿಳಾ ಶಕ್ತಿಯೇ ಪ್ರಜ್ವಲ್‌ ಅವರನ್ನು ಎಳೆದು ತಂದು ಸೆಲ್‌ಗೆ ಬಿಟ್ಟಿದೆ’ ಎಂದೂ ತಿಳಿಸಿವೆ.

ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ಅವರನ್ನು ಬಂಧಿಸಿದ ಎಸ್ಐಟಿ ಮಹಿಳಾ ಅಧಿಕಾರಿಗಳ ತಂಡ

ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ಅವರನ್ನು ಬಂಧಿಸಿದ ಎಸ್ಐಟಿ ಮಹಿಳಾ ಅಧಿಕಾರಿಗಳ ತಂಡ

ಮಹಿಳೆಯರ ಶಕ್ತಿ ತೋರಿಸಿದ್ದೇವೆ: ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಸಂತ್ರಸ್ತರ ಗೋಳು ನೋಡಿದ್ದೇವೆ. ಅವರು ಪಟ್ಟ ಕಷ್ಟಕ್ಕೆ ಮರುಗಿದ್ದೇವೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ಗೆ ಮಹಿಳೆಯರ ಶಕ್ತಿ ತೋರಿಸಬೇಕಿತ್ತು. ಹೀಗಾಗಿ, ಮಹಿಳಾ ಅಧಿಕಾರಿಗಳ ತಂಡದಿಂದಲೇ ಬಂಧಿಸಿ ಜೀಪಿನಲ್ಲಿ ಕರೆತಂದಿದ್ದೇವೆ’ ಎಂದು ಎಸ್‌ಐಟಿಯ ಮೂಲಗಳು ಹೇಳಿವೆ.

‘ಹಲವು ಆಮಿಷವೊಡ್ಡಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಇದೀಗ, ಅದೇ ಮಹಿಳಾ ಶಕ್ತಿಯೇ ಪ್ರಜ್ವಲ್‌ ಅವರನ್ನು ಎಳೆದು ತಂದು ಸೆಲ್‌ಗೆ ಬಿಟ್ಟಿದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT