ಶಿರಾ: ತಾಲ್ಲೂಕಿನ ರಾಮಲಿಂಗಾಪುರದ ಕೆರೆಗೆ ಭಾನುವಾರ ಬೆಳಗಿನ ಜಾವ ಕಾರು ಉರುಳಿ ಬಿದ್ದು ಒಂದೇ ಕುಟುಂಬದ ಮೂರು ಜನ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಮೇಕೆರಹಳ್ಳಿ ಗ್ರಾಮದ ಪ್ರವೀಣ್ ಮತ್ತು ಕುಟುಂಬದವರು ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಪ್ರವೀಣ್ ಪತ್ನಿ ಯಮುನಾ (25), ಮಾವ ದೊಡ್ಡಣ್ಣ(38), ಅತ್ತೆ ಚಿಕ್ಕಮ್ಮ (35) ಮೃತರು. ಪ್ರವೀಣ್ ಈಜಿ ದಡ ಸೇರಿದ್ದಾರೆ.
ಸಾಕ್ಷಿಹಳ್ಳಿ ಮಣ್ಣಮ್ಮ ದೇವಿಗೆ ಪೂಜೆ ಸಲ್ಲಿಸಿ ಹೋಗುವಾಗ ಯಮುನಾ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಏರಿ ಮೇಲಿಂದ ಕೆರೆಗೆ ಉರುಳಿದೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.