ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ನ್ಯಾಷನಲ್ ಸಮೂಹ ಸಂಸ್ಥೆಯ ಮೇಲೆ ಇ.ಡಿ ದಾಳಿ

Published 2 ಜನವರಿ 2024, 8:24 IST
Last Updated 2 ಜನವರಿ 2024, 8:24 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪ್ರತಿಷ್ಠಿತ ನ್ಯಾಷನಲ್ ಸಮೂಹ ಸಂಸ್ಥೆಯ ಮೇಲೆ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದಲೇ ಇ.ಡಿ ಅಧಿಕಾರಿಗಳು (ಜಾರಿ ನಿರ್ದೇಶನಾಲಯ) ಶೋಧ ನಡೆಸಿದೆ.

ಆಜಾದ್ ರಸ್ತೆಯಲ್ಲಿರುವ ನ್ಯಾಷನಲ್ ಸಮೂಹ ಸಂಸ್ಥೆಯ ಇಂಡಿಯನ್ ಗ್ಯಾಸ್, ನ್ಯಾಷನಲ್ ಇನ್ಫ್ರಾಬಿಲ್ಡ್ ಪ್ರೈ.ಲಿ. ಎಂಟರ್ ಪ್ರೈಸಸ್, ನ್ಯಾಷನಲ್ ಸೂಪರ್ ಬಜಾರ್, ಟ್ರಸ್ಟ್, ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಸೇರಿದಂತೆ ಬಾಳೇಬೈಲಿನಲ್ಲಿರುವ ಸಹೋದರ ಪಾಲುದಾರರ ಮನೆಗಳ ಮೇಲೆ ಶೋಧ ಕಾರ್ಯಾಚರಣೆ ಕೈಗೊಂಡಿದೆ.

ನ್ಯಾಷನಲ್ ಸಮೂಹ ಸಂಸ್ಥೆ ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರಿ ಗುತ್ತಿಗೆದಾರರಾಗಿ ಕೆಲಸ ಮಾಡಿದ್ದಾರೆ. ಚಿನ್ನಾಭರಣ ವ್ಯಾಪಾರದಲ್ಲಿಯೂ ಪ್ರಸಿದ್ಧಿ ಪಡೆದಿದ್ದಾರೆ.

ಉಳಿದಂತೆ ಅವರ ಸ್ವತ್ತುಗಳು ಮತ್ತು ಆಸ್ತಿಗಳಿರುವ ಬೆಂಗಳೂರು, ಪಡುಬಿದ್ರೆ, ಶಿವಮೊಗ್ಗ ಸೇರಿದಂತೆ ಹಲವು ಕಡೆಗಳ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT