ಈ ಬಗ್ಗೆಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂರಾಜ್ಯದ ಎಲ್ಲ ಸಂಸದರಿಗೆ ಸಂಸ್ಥೆ ಪತ್ರ ಬರೆದಿವೆ. ‘ಯುವಜನರು ತಂಬಾಕು ಕಂಪನಿಗಳ ಪ್ರಮುಖ ಗುರಿಯಾಗಿದ್ದಾರೆ. ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡಲು ತೆರಿಗೆ ಹೆಚ್ಚಳ ಅನಿವಾರ್ಯ. 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾದಾಗಿನಿಂದ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿಲ್ಲ. ಸಿಗರೇಟ್ಗಳ ಮೇಲೆ ಪ್ರಸ್ತುತ ಶೇ 53ರಷ್ಟು ತೆರಿಗೆ ಹೊರೆ ಇದೆ. ಈ ಪ್ರಮಾಣ ಬೀಡಿಗಳ ಮೇಲೆ ಶೇ 22ರಷ್ಟು ಮತ್ತು ಹೊಗೆರಹಿತ ತಂಬಾಕಿನ ಮೇಲೆ ಶೇ 60ರಷ್ಟು ಇದೆ. ಇದನ್ನು ಹೆಚ್ಚಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿವೆ.