ಸ್ವೀಪರ್ ಹುದ್ದೆಗೆ ಕುತ್ತು
ಎರಡು ಸ್ವೀಪರ್ ಹುದ್ದೆಗಳ ಪೈಕಿ, ಪರಿಶಿಷ್ಟ ಜಾತಿ ಮತ್ತು ಸಾಮಾನ್ಯ ವರ್ಗಕ್ಕೆ ತಲಾ ಒಂದರಂತೆ ಮೀಸಲಿರಿಸಲಾಗಿತ್ತು. ಆಯ್ಕೆಗಾಗಿ ನಡೆದ ಸಂದರ್ಶನದಲ್ಲಿ ಎಸ್. ಶೇಖರ್ 18.50 ಅಂಕ, ಪ್ರಶಾಂತ್ 19 ಅಂಕ ಗಳಿಸಿದ್ದರು. ಸಾಮಾನ್ಯ ಅರ್ಹತೆಯಡಿ ಪ್ರಶಾಂತ್ ಆಯ್ಕೆಯಾಗಿದ್ದರು. ಎಸ್‌ಸಿ ಮೀಸಲಾತಿಯಡಿ 21.50 ಅಂಕ ಗಳಿಸಿದ್ದ ತಿರುಪತಿ ಆಯ್ಕೆಯಾಗಿ|ದ್ದರು. ಆದರೆ, 2018ರ ನಿಯಮದ ಪ್ರಕಾರ, ಅತೀ ಹೆಚ್ಚು ಅಂಕ ಗಳಿಸಿದ ತಿರುಪತಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿ, ಎಸ್‌ಸಿ ಮೀಸಲಾತಿಯಡಿ ಅತೀ ಹೆಚ್ಚು ಅಂಕ ಪಡೆದಿದ್ದ ಶೇಖರ್ ಆಯ್ಕೆ ಆಗಬೇಕಿತ್ತು. ಹೈಕೋರ್ಟ್ ಆದೇಶದಂತೆ ಸಚಿವಾಲಯ ಪಟ್ಟಿಯನ್ನು ಪರಿಷ್ಕರಿಸಿದ್ದು, ಪ್ರಶಾಂತ್ ಹೊಸ ಪಟ್ಟಿಯಲ್ಲಿ ಹೊರಗುಳಿದು, ಶೇಖರ್ ಆಯ್ಕೆಯಾಗಿದ್ದಾರೆ. ಪ್ರಶಾಂತ್ ಅವರೂ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.