ಬೆಂಗಳೂರು: ಪರಿಸರ ಕಾಳಜಿಯಿದ್ದ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು ಅರಣ್ಯ ಸಂರಕ್ಷಣೆ, ವನ್ಯಮೃಗಗಳ ಸಂರಕ್ಷಣೆಗೆ ಕಾಯ್ದೆ ರೂಪಿಸಿದ್ದರು. ರಾಜ್ಯ ಸರ್ಕಾರ ಸಸ್ಯ, ಪ್ರಾಣಿಸಂಕುಲದ ಸಂರಕ್ಷಣೆಗೆ ಬದ್ಧವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಭೇಟಿ ಮಾಡಿದ ನಿವೃತ್ತ ಐಎಫ್‌ಎಸ್ ಅಧಿಕಾರಿ ಸಂಜಯ್ ಕುಮಾರ್ ನೇತೃತ್ವದ ಪಶ್ಚಿಮ ಘಟ್ಟಗಳ ಕುರಿತ ತಜ್ಞರ ಸಮಿತಿಯ ನಿಯೋಗದ ಜತೆ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ನಮ್ಮ ಪೂರ್ವಜರು ಅರಣ್ಯ, ಬೆಟ್ಟಗುಡ್ಡ, ನದಿಮೂಲ, ಜಲಾನಯನ ಪ್ರದೇಶವನ್ನು ಸಂರಕ್ಷಿಸಿದ್ದಾರೆ ಎಂದು ಶ್ಲಾಘಿಸಿದರು.
ಪಶ್ಚಿಮಘಟ್ಟದ ವೈವಿಧ್ಯ, ದೇಶದ ನಾನಾ ಭಾಗಗಳ ಹವಾಮಾನ, ಮೀನುಗಾರಿಕೆಯ ಮೇಲೆ ಪಶ್ಚಿಮ ಘಟ್ಟದ ಪ್ರಭಾವ ಕುರಿತು ಸಂಜಯ್ ಕುಮಾರ್ ವಿವರ ನೀಡಿದರು.
ನಿಯೋಗದಲ್ಲಿ ಭಾರತೀಯ ವಿಜ್ಞಾನ ಮಂದಿರದ ಸುಕುಮಾರ್, ಕೇಂದ್ರ ಅರಣ್ಯ, ಜೀವಿಶಾಸ್ತ್ರ, ಹವಾಮಾನ ವೈಪರೀತ್ಯ ಸಚಿವಾಲಯದ ಸದಸ್ಯ ಕಾರ್ಯದರ್ಶಿ ಎಸ್.ಕೆ. ಖನ್ನಾ, ವಿಜ್ಞಾನಿಗಳಾದ ರಿತೇಶ್ ಜೋಶಿ, ಸುರೇಶ್ ಕುಮಾರ್ ಮತ್ತು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.