ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅದರ ಅಧೀನದ ವಿವಿಧ ನಿರ್ದೇಶನಾಲಯಗಳಲ್ಲಿ 2024ರ ನವೆಂಬರ್ನಲ್ಲಿ 97 ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದು, ಅವರಲ್ಲಿ 49 ಮಂದಿಗೆ ಸ್ಥಳ ನಿಯುಕ್ತಿ ಮಾಡಿರಲಿಲ್ಲ. ಅವರಲ್ಲಿ ಬಹುತೇಕರು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ.

ಸ್ಥಳ ನಿಯುಕ್ತಿ ಆಗದೆ ಹುದ್ದೆ ನಿರೀಕ್ಷಣೆಯಲ್ಲಿ ಇರುವ ಸಿಬ್ಬಂದಿಗೆ ಹಲವು ತಿಂಗಳಿಂದ ವೇತನವೂ ಪಾವತಿಯಾಗಿಲ್ಲ.

2023ರ ಜುಲೈನಿಂದ ಇಲಾಖೆಯು 30 ವರ್ಗಾವಣೆ ಆದೇಶಗಳನ್ನು ಹೊರಡಿಸಿ, 1,230 ಅಧಿಕಾರಿ ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದೆ. 102 ಸಿಬ್ಬಂದಿಗೆ ಸ್ಥಳ ನಿಯುಕ್ತಿ ಆಗಿರಲಿಲ್ಲ. ಇವರಲ್ಲಿ ಕೆಲವು ಸಿಬ್ಬಂದಿಗೆ ಹೆಚ್ಚುವರಿ ಆದೇಶ ಹೊರಡಿಸಿ ಸ್ಥಳ ನಿಯುಕ್ತಿ ನೀಡಿದ್ದು, 86 ಮಂದಿ ಯಾವುದೇ ಹುದ್ದೆ ಇಲ್ಲದೆ ಇದ್ದಾರೆ.

‘ಮುಂಬಡ್ತಿ ನೀಡಿ ಮತ್ತು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗುತ್ತದೆ. ಆದರೆ, ಸ್ಥಳ ನಿಯುಕ್ತಿ ಮಾತ್ರ ಮಾಡುವುದಿಲ್ಲ. ಸ್ಥಳ ನಿಯುಕ್ತಿ ಸಿಗದ ಸಿಬ್ಬಂದಿ ಲಂಚ ನೀಡಿದರೆ ಒಂದೆರಡು ದಿನಗಳಲ್ಲೇ ಅವರಿಗೆ ಹುದ್ದೆ ನೀಡಲಾಗುತ್ತಿದೆ ಅಥವಾ ವರ್ಗಾವಣೆಯನ್ನು ರದ್ದು ಮಾಡಿ ಹೊಸ ಆದೇಶ ನೀಡಲಾಗುತ್ತಿದೆ’ ಎಂದು ಇಲಾಖೆಯ ಪ್ರಧಾನ ಕಚೇರಿಯ ಅಧಿಕಾರಿಯೊಬ್ಬರು ಆರೋಪಿಸಿದರು.

2024ರ ಜುಲೈ 26ರಂದು ಎರಡು ಆದೇಶಗಳನ್ನು ಹೊರಡಿಸಿ 116 ಅಧಿಕಾರಿ ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿತ್ತು. ಅದೇ ಜುಲೈ 31ರಂದು ಮತ್ತೊಂದು ಆದೇಶ ಹೊರಡಿಸಿ 14 ಮಂದಿಯ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದೆ. ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಆಗಿದ್ದವರ ಆದೇಶವನ್ನು ಮಾರ್ಪಡಿಸಿ, ಅವರು ಈ ಮೊದಲು ಇದ್ದ ಜಿಲ್ಲೆಯಲ್ಲೇ ಉಳಿಸಲಾಗಿದೆ.

‘ವರ್ಗಾವಣೆ ಹೆಸರಿನಲ್ಲಿ ಹಣ ಮಾಡಲು ಇಲಾಖೆಯ ಉನ್ನತ ಅಧಿಕಾರಿಗಳು ಅನುಸರಿಸುತ್ತಿರುವ ತಂತ್ರ ಇದು. ಇಲಾಖೆಯಲ್ಲಿ ಇದು ದೊಡ್ಡ ದಂಧೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಉನ್ನತ ಅಧಿಕಾರಿಯೊಬ್ಬರ ಆಣತಿಯಂತೆ ಇದು ನಡೆಯುತ್ತಿದೆ’ ಎಂದು ಅಧಿಕಾರಿ ವಿವರಿಸಿದರು.

ಸ್ಥಳನಿಯುಕ್ತಿ ಆಗದಿದ್ದವರು ಸಂಬಂಧಿತ ನಿರ್ದೇಶನಾಲಯ ಅಥವಾ ಇಲಾಖೆಯ ಕೇಂದ್ರ ಕಚೇರಿಗೆ ಬಂದು ಸಹಿ ಮಾಡಬೇಕು. ಆಗಷ್ಟೇ ಅವರಿಗೆ ಆ ಅವಧಿಯ ವೇತನ, ಸ್ಥಳ ನಿಯುಕ್ತಿಯ ನಂತರ ಪಾವತಿಯಾಗುತ್ತದೆ. ಸಹಿ ಮಾಡದ ಸಿಬ್ಬಂದಿಗೆ ವೇತನ ಬಿಡುಗಡೆ ಆಗುವುದೇ ಇಲ್ಲ ಎನ್ನುತ್ತಾರೆ ಕೇಂದ್ರ ಕಚೇರಿಯ ಸಿಬ್ಬಂದಿ.

ಮಾಹಿತಿ ಇಲ್ಲ ಎಂದ ಇಲಾಖೆ

ಸ್ಥಳ ನಿಯುಕ್ತಿ ಆಗದೆ ಇರುವ ಸಿಬ್ಬಂದಿ ಮತ್ತು ಅವರಲ್ಲಿ ವೇತನ ಪಾವತಿ ಆಗುತ್ತಿರುವವರ ವಿವರ ತನ್ನ ಬಳಿ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.

ಈ ಸಂಬಂಧ ವಿವರ ಕೇಳಿ ಮಾಹಿತಿ ಹಕ್ಕು ಕಾಯ್ದೆ ಅಡಿ ಇಲಾಖೆಗೆ ನಾಲ್ಕು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅವುಗಳಿಗೆ ಉತ್ತರ ನೀಡಿರುವ ಇಲಾಖೆಯು, ‘ಗ್ರೂಪ್–ಎ ಅಧಿಕಾರಿಗಳ ವಿವರ ಮಾತ್ರ ಇಲಾಖೆಯಲ್ಲಿ ಲಭ್ಯವಿದೆ. ಗ್ರೂಪ್–ಬಿ, ಸಿ ಮತ್ತು ಡಿ ದರ್ಜೆಯ ನೌಕರರು ಇಲಾಖೆಯ ವಿವಿಧ ನಿರ್ದೇಶನಾಲಯಗಳ ಅಡಿಯಲ್ಲಿ ಬರುತ್ತಾರೆ. ಅವರಿಗೆ ಸಂಬಂಧಿಸಿದ ಮಾಹಿತಿ ನಮ್ಮಲ್ಲಿ ಲಭ್ಯವಿಲ್ಲ’ ಎಂದಿದೆ.

‘ಹುದ್ದೆಯ ನಿರೀಕ್ಷಣೆಯಲ್ಲಿ ಇರುವ ಅಧಿಕಾರಿ ಅಥವಾ ಸಿಬ್ಬಂದಿಗೆ ಸ್ಥಳ ನಿಯುಕ್ತಿ ಆದ ನಂತರವೇ ವೇತನ ಪಾವತಿಯಾಗುವುದು ನಿಯಮ. ಆದರೆ ವೇತನ ಪಾವತಿಯ ವಿವರ ನಮ್ಮಲ್ಲಿ ಲಭ್ಯವಿಲ್ಲ’ ಎಂದೂ ಇಲಾಖೆ ಉತ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.