ಮೈಸೂರು: ‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ; ಟಿಕೆಟ್ ಆಕಾಂಕ್ಷಿಯೂ ಅಲ್ಲ’ ಎಂದು ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಹೇಳಿದರು.
ಬಿಜೆಪಿಯವರು ಟಿಕೆಟ್ ಆಫರ್ ಮಾಡಿರುವ ಬಗ್ಗೆ ಇಲ್ಲಿ ಬುಧವಾರ
ಪ್ರತಿಕ್ರಿಯಿಸಿದ ಅವರು, ‘ಸದ್ಯದ ಪರಿಸ್ಥಿತಿ ಯಲ್ಲಿ ಮಾನಸಿಕ, ದೈಹಿಕ ಹಾಗೂ ಆರ್ಥಿಕವಾಗಿ ಸ್ವಲ್ಪ ಸಮಸ್ಯೆಯಲ್ಲಿದ್ದೇನೆ. ಆದ್ದರಿಂದ ಸ್ಪರ್ಧೆಗೆ ಮನಸ್ಸಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಬಿಜೆಪಿ ಮುಖಂಡರೊಂದಿಗೆ 38 ವರ್ಷಗಳಿಂದಲೂ ಒಡನಾಟವಿದೆ. ಅವರ ಭೇಟಿಗೆ ಯಾವುದೇ ವಿಶೇಷ ಅರ್ಥವಿಲ್ಲ ಎಂದರು.