ದೊಡ್ಡಬಳ್ಳಾಪುರ: ಮಾನಸಿಕ ಅಸ್ವಸ್ಥನೊಬ್ಬ ಕುಡಿಯುವ ನೀರು ಸರಬರಾಜು ಮಾಡುವ ಗ್ರಾಮದ ಮುಖ್ಯ ಟ್ಯಾಂಕರ್ಗೆ ವಿಷ ಬೆರೆಸಿದ ಘಟನೆ ಶನಿವಾರ ತಾಲ್ಲೂಕಿನ ಮಂಡಿ ಬ್ಯಾಟರಾಯನಪುರ ಗ್ರಾಮದಲ್ಲಿ ನಡೆದಿದೆ.

ಆರೋಪಿಯನ್ನು ಗ್ರಾಮದ ನಿವಾಸಿ ನಾಗರಾಜ್ (55) ಎಂದು ಗುರುತಿಸಲಾಗಿದೆ.ಇತ್ತೀಚೆಗೆ ನಾಗರಾಜನ ಗರ್ಭಿಣಿ ಮಗಳು ಅಶ್ವಿನಿ ನೆರೆಮನೆಯಲ್ಲಿ ಸುಮಾರು ರೂ 1 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದು ಸಿಕ್ಕಿಬಿದ್ದಿದ್ದಳು. ಗ್ರಾಮದ ಹಿರಿಯರು ಪಂಚಾಯ್ತಿ ನಡೆಸಿ ಆಕೆ ಗರ್ಭಿಣಿ ಇರುವುದರಿಂದ ಶಿಕ್ಷೆ ನೀಡದಂತೆ ವಿನಾಯ್ತಿ ನೀಡಿದ್ದರು ಮತ್ತು ಆಕೆಯಿಂದ ಕಳುವಾದ ವಸ್ತುಗಳ ಮೌಲ್ಯದಲ್ಲಿ ಅರ್ಧದಷ್ಟನ್ನು ವಾಪಸು ಪಡೆದಿದ್ದರು. ಈ ಘಟನೆ ಅಶ್ವಿನಿಯ ತಂದೆ ನಾಗರಾಜನಿಗೆ ಸಿಟ್ಟು ತರಿಸಿತ್ತು.

ಪಂಚಾಯ್ತಿ ನಡೆದ ದಿನದಿಂದ ಅಶ್ವಿನಿ ಮತ್ತು ನಾಗರಾಜ ಇಬ್ಬರೂ ಗ್ರಾಮವನ್ನು ತೊರೆದಿದ್ದರು ಎಂದು ಗ್ರಾಮಸ್ಥರು ವಿವರಿಸಿದ್ದಾರೆ.ಶುಕ್ರವಾರವಷ್ಟೇ ನಾಗರಾಜ ಗ್ರಾಮಕ್ಕೆ ಮರಳಿ ಬಂದಿದ್ದ. ವಿಪರೀತ ಕುಡಿತದ ನಶೆಯಲ್ಲಿದ್ದ ಆತ ಗ್ರಾಮಸ್ಥರನ್ನು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದ. ಎಲ್ಲರಿಗೂ ತಕ್ಕ ಪಾಠ ಕಲಿಸುವುದಾಗಿ ಹೇಳುತ್ತಿದ್ದ.

ಮರುದಿನ ಶನಿವಾರ ಬೆಳ್ಳಂಬೆಳಿಗ್ಗೆ ಟ್ಯಾಂಕ್ ಮೇಲೆ ಹತ್ತಿ ಬಾಟಲಿಯಲ್ಲಿ ಏನನ್ನೊ ಸುರಿಯುತ್ತಿರುವುದನ್ನು ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರು ಗಮನಿಸಿದ್ದಾರೆ. ಹಿಂದಿನ ದಿನ ಅವನು ಹೇಳಿದ್ದ `ಎಲ್ಲರನ್ನೂ ಒಂದು ಕೈ ನೋಡಿಕೊಳ್ಳುತ್ತೇನೆ~ ಎಂಬ ಮಾತುಗಳನ್ನು ನೆನಪಿಸಿಕೊಂಡ ಕೂಡಲೇ ಎಚ್ಚೆತ್ತುಕೊಂಡ ಅವರು ಅನುಮಾನ ಬಂದು ಕೂಗಿಕೊಂಡಿದ್ದಾರೆ. ಕೂಡಲೇ ನಾಗರಾಜ ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋದ ಎಂದು ಸ್ಥಳೀಯ ನಿವಾಸಿ ಮಂಗಳಾ `ಪ್ರಜಾವಾಣಿ~ಗೆ ವಿವರಿಸಿದರು.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ನೀರಿನ ಸಂಪರ್ಕವನ್ನು ಸಂಪೂರ್ಣ ಸ್ಥಗಿತಗೊಳಿಸಿದರು. ಈ ಟ್ಯಾಂಕನ್ನು ಎರಡುವಾರಗಳ ಹಿಂದಷ್ಟೇ ಭರ್ತಿ ಮಾಡಲಾಗಿತ್ತು. ಗ್ರಾಮಸ್ಥರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ನೀರಿನ ಟ್ಯಾಂಕರ್ಗೆ ವಿಷ ಬೆರೆಸಿದ್ದ ಎಂದು ಅಂದಾಜಿಸಲಾಗಿದೆ. ನೀರನ್ನು ಈಗ ಪರೀಕ್ಷೆಗೆ ಕಳುಹಿಸಲಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರಾಜನ ಕುಟುಂಬವು ಗ್ರಾಮಸ್ಥರ ಪಾಲಿಗೆ ಅನೇಕ ಬಾರಿ ಕಿರಿಕಿರಿ ಉಂಟು ಮಾಡಿತ್ತು ಎಂದು ಸ್ಥಳೀಯರು ದೂರಿದ್ದಾರೆ. ಅಪಾಯಕಾರಿ ಸಾಂಕ್ರಾಮಿಕ ಹರಡುವಿಕೆಯ ಆರೋಪದ ಅಡಿ ನಾಗರಾಜನ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 270ರ ಅನುಸಾರ ದೂರು ದಾಖಲಿಸಿಕೊಳ್ಳಲಾಗಿದೆ. ತಪ್ಪಿಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ವ್ಯಾಪಕ ಬಲೆ ಬೀಸಲಾಗಿದೆ ಎಂದು ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಡಿ.ಆರ್. ನಾಗರಾಜ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.