ಹುಬ್ಬಳ್ಳಿ: ಮೊಬೈಲ್ ಮೋಡಿಯೇ ಅಂಥ್ದ್ದಾದು. ಜೇಬಿನಲ್ಲಿ ಕರವಸ್ತ್ರ ಇಲ್ಲದಿದ್ದರೂ ಚಿಂತೆಯಿಲ್ಲ. ಕೈಯಲ್ಲಿ ಮೊಬೈಲ್ ಹಿಡಿಯುವುದನ್ನು ಮಾತ್ರ ಮರೆಯೋ ಹಾಗೇ ಇಲ್ಲ. ಈಗಂತೂ ಮೊಬೈಲ್ ಎಷ್ಟು ಅಗ್ಗವಾಗಿದೆ ಎಂದರೆ, ಮೆಸೇಜ್ ಫ್ರೀ. ಕಾಲ್ ರೇಟ್ ಅಟ್ ಜಸ್ಟ್ ಹಾಫ್ ಪೈಸೆ.

ಕೆಲವೊಮ್ಮೆ ಗೊತ್ತಿಲ್ಲದ ನಂಬರ್ಗಳಿಂದಲೂ ಕರೆಗಳು ಬರುತ್ತವೆ. ಮೊಬೈಲ್ ಮಾಯೆಯ ಸುಳಿಯಲ್ಲಿ ಇತ್ತೀಚೆಗೆ ಹೊಸದೊಂದು ಕರಾಮತ್ತು ಶುರುವಾಗಿ ಬಿಟ್ಟಿದೆ. 9609316579, 9609320379 ಈ ನಂಬರ್ನಿಂದ ಮೊಬೈಲ್ ಕರೆ ಬಂದಾಗ ಪೋನ್ ಎತ್ತಬೇಕೆನ್ನುವಷ್ಟರಲ್ಲಿಯೇ ಕಟ್ ಆಗುತ್ತವೆ.

ಈ ಕರೆ ಯಾರದಿರಬಹುದು? ಏನು ವಿಷಯ ಹೇಳಲು ಫೋನ್ ಮಾಡಿದ್ದರೋ ಏನು? ಎಂಬ ತವಕ ಶುರುವಾಗಿಯೇ ಬಿಡುತ್ತದೆ. ಆಗಲೇ ಹಾಫ್ ಪೈಸೆಯ ಆಮಿಷದಿಂದ, ಆ ನಂಬರಿಗೆ ರಿಡಯಲ್ ಮಾಡಲು ಬೆರಳುಗಳು ಹವಣಿಸುತ್ತಿವೆ.

ಮಿಸ್ಡ್ ಕಾಲ್ನಲ್ಲಿರುವ ನಂಬರ್ಗೆ ಕರೆ ಮಾಡಿದರೆ ಅಲ್ಲಿಂದ ಒಂದು ಗಣಕೀಕೃತ ಧ್ವನಿ ಕೇಳಿಸುತ್ತದೆ. ಆಪ್ ಅಕೆಲೆ ಹೋ... ಆಪ್ ಉದಾಸ ಹೋ ಎಂಬ ಮಾತು ಆರಂಭವಾಗುತ್ತದೆ. ಹೀಗೇಕೆ ಮಾತನಾಡುತ್ತಿದ್ದಾರೆ ಎಂದು ಹಲೋ ಹಲೋ ಎಂದು ಹಲವಾರು ಬಾರಿ ಹೇಳಿದರೂ, ಆ ಕಡೆಯಿಂದ ಯಾವುದೇ ಉತ್ತರ ಬರುವುದಿಲ್ಲ. ಅಷ್ಟರಲ್ಲಿಯೇ ಕಟ್ ಮಾಡಿ ನಿಮ್ಮ ಕರೆನ್ಸಿ ನೋಡಿಕೊಂಡರೆ, ಬಿಸಿಲಿಗೆ ಮೈಯೊಡ್ಡಿದ ಹಿಮದಂತೆ ಅದು ಕರಗಿರುತ್ತದೆ.

ಇದರಲ್ಲಿ ಒಂದು ವಿಶೇಷ ಎಂದರೆ ನೀವು ಆ ನಂಬರ್ಗೆ ಕರೆ ಮಾಡಿದರೆ ರಿಂಗ್ ಕೂಡ ಆಗುವುದಿಲ್ಲ. ಬದಲಿಗೆ ಕಾಲ್ ಮಾಡಿದ ತಕ್ಷಣವೇ ಮೇಲೆ ಹೇಳಿದಂತಹ ಧ್ವನಿ ಕೇಳಿಸುತ್ತದೆ. ನೀವು ಮರಳಿ ಕರೆ ಮಾಡಿ ಹಲೋ ಎಂದರೆ ಸಾಕು ನಿಮ್ಮ ಮೊಬೈಲ್ನಿಂದ 40 ರೂಪಾಯಿ ಮಾಯವಾಗಿರುತ್ತದೆ!

ಹಲವಾರು ಜನರಿಗೆ ಈ ಅನುಭವವಾಗಿದೆ. ಇದೇ ನಂಬರಿಗೆ ಸ್ಥಿರ ದೂರವಾಣಿಯಿಂದ ಕರೆ ಮಾಡಿದರೆ ಈ ಪೋನ್ಗಳು ಸಂಪರ್ಕದಲ್ಲಿ ಇಲ್ಲ ಎಂಬ ಸಿದ್ಧ ಉತ್ತರ ತಯಾರಾಗಿರುತ್ತದೆ.

ಆದರೆ ಎಲ್ಲರೂ ಗಮನಿಸಬೇಕಾದ ಸಂಗತಿ ಎಂದರೆ ಯಾವುದೇ ಕರೆಗಳು ಬಂದರೂ ಆ ನಂಬರ್ +91ನಿಂದ ಆರಂಭವಾಗುತ್ತದೆ. ಅದರ ಬದಲಿಗೆ ಕೇವಲ 10 ಸಂಖ್ಯೆಯುಳ್ಳ ನಂಬರ್ ಮಾತ್ರ ಇರುತ್ತದೆ. ಈ ಕರೆಗಳಿಗೆ ನೀವು ಮರಳಿ ಕರೆ ಮಾಡಿದರೆ ನಿಮ್ಮ ಜೇಬಿಗೆ ಕನಿಷ್ಠ ರೂ 40 ಕತ್ತರಿ ಬೀಳುತ್ತದೆ. ಹಲವಾರು ಜನರು ಮರಳಿ ಕರೆ ಮಾಡಿ ಹಣ ಕಳೆದುಕೊಂಡಿದ್ದಾರೆ.

08067725000, 08033215100 ಸಂಖ್ಯೆಗೆ ಪೋನ್ ಮಾಡಿದರೂ ಅದೇ ರೀತಿ ಆಗುತ್ತದೆ. ಸ್ಥಿರ ದೂರವಾಣಿಯಿಂದ ಕರೆ ಮಾಡಿದರೆ ನೀವು ಕರೆ ಮಾಡಿದ ಸಂಖ್ಯೆ ಚಾಲನೆಯಲ್ಲಿ ಇಲ್ಲ ಅಥವಾ ಟಿವ್ ಟಿವ್ ಎಂಬ ಶಬ್ದ ಬಂದು ಕಟ್ ಆಗುತ್ತದೆ.

`ಈ ರೀತಿಯ ಕರೆಗಳಿಂದ ಬೇಸತ್ತು ಹೋಗಿದ್ದೇವೆ. ಈ ಕುರಿತು ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ ಯಾವುದೇ ಉತ್ತರ ಸಿಗುವುದಿಲ್ಲ~ ಎನ್ನುತ್ತಾರೆ ಸಂತೋಷಕುಮಾರ ನವಲಿ.

ಹಲವು ಬಾರಿ ಹಣ ಕಳೆದುಕೊಂಡರೂ ಜನರಿಗೆ ಮೊಬೈಲ್ ಬಗ್ಗೆ ಬೇಸರವಿಲ್ಲ. ಇದೇ ಅಲ್ಲವೇ ಮೊಬೈಲ್ ಮೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.