ತುಮಕೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮತ್ತು ಅಂತರರಾಷ್ಟ್ರೀಯ ಮಟ್ಟದ್ಲ್ಲಲಿ ಕೂಡ ಮನ್ನಣೆ ಪಡೆದ `ಸಕಾಲ' ಯೋಜನೆಗೆ ಜಿಲ್ಲೆಯಲ್ಲಿ ಮಧ್ಯವರ್ತಿಗಳಿಂದಾಗಿ ಕಳಂಕ ತಟ್ಟಿದೆ. ಹಣ ಕೊಟ್ಟರೆ ಸಾಕು, ಮಧ್ಯವರ್ತಿಗಳು `ಸಕಾಲ'ದ ಎಲ್ಲ ನೀತಿ ನಿಯಮ ಮೀರಿ ಒಂದೇ ದಿನದಲ್ಲಿ ನೀವು ಕೇಳಿದ ದಾಖಲೆ ಕೊಡಿಸಬಲ್ಲರು.

ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಜಾರಿಗೆ ತರಲಾದ `ಸಕಾಲ' ಯೋಜನೆ ಮಾಫಿಯಾ ರೂಪ ಪಡೆದುಕೊಳ್ಳುತ್ತಿದೆ. ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ

ಕ್ಯಾಮೆರಾ ಕಣ್ಗಾವಲು
`ಸಕಾಲ' ಹಾಗೂ `ಅಟಲ್ಜೀ ಜನಸ್ನೇಹಿ ಕೇಂದ್ರ'ದಲ್ಲಿ ಮಧ್ಯವರ್ತಿಗಳನ್ನು ನಿಯಂತ್ರಿಸುವ ಸಲುವಾಗಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ತಹಶೀಲ್ದಾರ್ ಬಿ.ವಿ.ಮಾರುತಿ ಪ್ರಸನ್ನ ತಿಳಿಸಿದರು.

`ಸಕಾಲ' ಕೇಂದ್ರಕ್ಕೆ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು `ಮೊದಲು ಬಂದವರಿಗೆ ಮೊದಲ ಆದ್ಯತೆ' ಅನುಸಾರ ವಿಲೇವಾರಿ ಮಾಡುವಂತೆ ಕೆಳ ಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಜೊತೆಗೆ ಅರ್ಜಿ ಸ್ವೀಕಾರ ಮತ್ತು ವಿಲೇವಾರಿಯ ದಾಖಲೆ ಪುಸ್ತಕವನ್ನು ಖುದ್ದು ಪರಿಶೀಲಿಸಲಾಗುವುದು ಎಂದು ಹೇಳಿದರು.

ಆವರಣದಲ್ಲಿರುವ `ಸಕಾಲ' ಕೇಂದ್ರದಲ್ಲಿ ಸದ್ದಿಲ್ಲದೇ ಜನರ ಕಿಸೆಗೆ ಮಧ್ಯವರ್ತಿಗಳು ಕತ್ತರಿ ಹಾಕುತ್ತಿದ್ದಾರೆ. `ಸಕಾಲ' ಕೇಂದ್ರದ ಸುತ್ತ ಒಮ್ಮೆ ಸುತ್ತಾಡಿದರೆ ಸಾಕು ಹಣದಾಹಿ ಮಧ್ಯವರ್ತಿಗಳ ದಂಡು ದಾಖಲೆ ಕೊಡಿಸಲು ತಾ ಮುಂದು, ನಾ ಮುಂದು ಎಂದು ಬರುತ್ತದೆ.

`ಪ್ರಜಾವಾಣಿ' ಪ್ರತಿನಿಧಿ, ಕೇಂದ್ರದ ಬಳಿ ಹೋದಾಗಲೂ ಹಲವಾರು ಮಧ್ಯವರ್ತಿಗಳು ದಾಖಲೆ ಮಾಡಿಸಿಕೊಡುವುದಾಗಿ ದುಂಬಾಲು ಬಿದ್ದರು. ಸಾರ್ವಜನಿಕರನ್ನು ಸತಾಯಿಸುತ್ತಿರುವ ದೃಶ್ಯ ಕಂಡುಬಂತು. ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಣ, ಮಧ್ಯವರ್ತಿಗಳಿಗೆ ಅಂಕುಶ ಹಾಕುವ ಸಲುವಾಗಿ ಸರ್ಕಾರ `ಸಕಾಲ' ಯೋಜನೆ ಆರಂಭಿಸಿದೆ.

ಆದರೆ ಇದು ನಗರದಲ್ಲಿ ಸಮರ್ಪಕ ರೀತಿಯಲ್ಲಿ ಜಾರಿಯಾಗುತ್ತಿಲ್ಲ. ಮಧ್ಯವರ್ತಿಗಳ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ದೂರಿದರು.

`ಸಕಾಲ' ದಂಧೆ?: `ಸಕಾಲ' ಯೋಜನೆಯ ಒಂದೊಂದು ಸೇವೆಗೂ ಮಧ್ಯವರ್ತಿಗಳು ಇಂತಿಷ್ಟು ಶುಲ್ಕ ನಿಗದಿ ಮಾಡಿದ್ದಾರೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ರೂ 250, ಉಳಿದ ದಾಖಲೆಗಳಿಗೆ ರೂ 300. ಅರ್ಜಿ ಸಲ್ಲಿಸಿದ ಗಂಟೆಯಲ್ಲೇ ದಾಖಲೆ ಬೇಕಾದರೆ ದುಪ್ಪಟ್ಟು ಹಣ ತೆತ್ತಬೇಕು.

`ಶುಲ್ಕ ಹೆಚ್ಚಾಯಿತು. ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ' ಎಂದರೆ `ಬಿಲ್ಕುಲ್ ಆಗಲ್ಲ. ನೀವು ಕೊಡುವ ಹಣವನ್ನು ಸಿಬ್ಬಂದಿಗೆ ಹಂಚಬೇಕು' ಎಂದು ಮಧ್ಯವರ್ತಿಯೊಬ್ಬ ಮುಖಕ್ಕೆ ಹೊಡದಂತೆ ಹೇಳಿ ನಡೆದೇಬಿಟ್ಟ.

ನಕಲಿ ವಿಳಾಸಕ್ಕೂ ದೃಢೀಕರಣ: ನೀವು ಯಾವುದೇ ಊರಿನವರಾಗಿರಿ, ವಾಸಸ್ಥಳದ ದೃಢೀಕರಣ ಪತ್ರ ಒಂದೇ ದಿನದಲ್ಲಿ ಸಿದ್ಧವಾಗುತ್ತದೆ. ದೃಢೀಕರಣ ಪತ್ರ ಬೇಕು, ಯಾವುದೇ ವಿಳಾಸ ಇಲ್ಲ ಎಂದು ಮಧ್ಯವರ್ತಿಗಳ ಬಳಿಗೆ ಹೋದರೆ ಸಾಕು.ರೂ 300 ತೆಗೆದುಕೊಂಡು, `ಸಂಜೆ ಅಥವಾ ನಾಳೆ ಬನ್ನಿ, ದೃಢೀಕರಣ ಪತ್ರ ತೆಗೆದುಕೊಂಡು ಹೋಗಿ' ಎನ್ನುತ್ತಾರೆ.

ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಪತ್ರ ಮಾರುವವರೂ ಮಧ್ಯವರ್ತಿಗಳಿಗೆ ನಿಕಟವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಜನರಿಂದ ಪಡೆಯುವ ಹಣವನ್ನು ಇಬ್ಬರೂ ಹಂಚಿಕೊಳ್ಳುತ್ತಾರೆ. ಇದು ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳಿಗೆ ಗೊತ್ತಿರುವ ವಿಚಾರವೇ. ಆದರೆ ಯಾರೊಬ್ಬರೂ ಮಧ್ಯವರ್ತಿಗಳನ್ನು ನಿಯಂತ್ರಿಸಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

`ಸಿಂಧುತ್ವ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದೇನೆ. ಇದಕ್ಕಾಗಿ ರೂ 1000 ಖರ್ಚಾಗಿದ್ದು, ಕೆಲಸದ ಸ್ಥಳಕ್ಕೆ ಸಿಂಧುತ್ವ ಕಳುಹಿಸಿಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅದನ್ನು ಯಾವಾಗ ಕಳುಹಿಸುತ್ತಾರೆ ಎಂಬುದೇ ತಿಳಿಯದಾಗಿದೆ' ಎಂದು ಸಕಾಲ ಕೇಂದ್ರದ ಮುಂದಿದ್ದ, ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ ಪಾವಗಡ ತಾಲ್ಲೂಕಿನ ಯುವಕರೊಬ್ಬರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.