ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಹೋರ್‌: 1,200 ವರ್ಷದಷ್ಟು ಹಳೆಯ ದೇವಾಲಯ ಸಾರ್ವಜನಿಕರ ದರ್ಶನಕ್ಕೆ ಮುಕ್ತ

Last Updated 4 ಆಗಸ್ಟ್ 2022, 12:34 IST
ಅಕ್ಷರ ಗಾತ್ರ

ಲಾಹೋರ್‌: ಇಲ್ಲಿನ ಪಂಜಾಬ್‌ ಪ್ರಾಂತ್ಯದಲ್ಲಿರುವ 1,200 ವರ್ಷದಷ್ಟು ಹಳೆಯದಾದ ವಾಲ್ಮೀಕಿ ದೇವಾಲಯವನ್ನು ಸಾರ್ವಜನಿಕರ ದರ್ಶನಕ್ಕೆ ಬುಧವಾರ ಮುಕ್ತಗೊಳಿಸಲಾಗಿದೆ.

‘100 ಮಂದಿ ಹಿಂದೂಗಳು, ಕೆಲವು ಸಿಖ್ಖರು, ಕ್ರಿಶ್ಚಿಯನ್ನರು ಹಾಗೂ ಮುಸ್ಲಿಂ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು’ ಎಂದು ರಾಷ್ಟ್ರೀಯ ಸಮಿತಿಯು ವಕ್ತಾರ ಆಮೀರ್‌ ಹಶ್ಮಿ ತಿಳಿಸಿದರು.

ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದೇವೆ ಎಂದು ಹೇಳಿಕೊಂಡಿದ್ದ ಕ್ರೈಸ್ತ ಕುಟುಂಬವೊಂದು ಕಳೆದ ಎರಡು ದಶಕಗಳಿಂದ ವಾಲ್ಮೀಕಿ ದೇವಸ್ಥಾನ ಇರುವ ಜಾಗವನ್ನು ತನ್ನ ವಶದಲ್ಲಿರಿಸಿಕೊಂಡಿತ್ತು. ಬಹುವರ್ಷಗಳ ಕಾನೂನು ಹೋರಾಟದ ಮೂಲಕ ಈ ದೇವಾಲಯವನ್ನು ಬಿಡಿಸಿಕೊಳ್ಳಲಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಪೂಜಾಸ್ಥಳಗಳ ಉಸ್ತುವಾರಿ ನೋಡಿಕೊಳ್ಳುವ ‘ದಿ ಇವ್ಯಾಕ್ಯೂ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್‌’ (ಇಟಿಪಿಬಿ) ಎಂಬ ರಾಷ್ಟ್ರೀಯ ಸಮಿತಿಯು ದೇವಾಲಯ ಇರುವ ಜಾಗವನ್ನು ಕಳೆದ ತಿಂಗಳು ತನ್ನ ಉಸ್ತುವಾರಿಗೆ ಪಡೆದುಕೊಂಡಿದೆ.

ವಾಲ್ಮೀಕಿ ಸಮುದಾಯದವರಿಗೆ ಮಾತ್ರವೇ ದೇವಾಲಯ ಪ್ರವೇಶಕ್ಕೆ ಕ್ರೈಸ್ತ ಕುಟುಂಬವು ಅನುಮತಿ ನೀಡುತ್ತಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT