ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾಕ್‌ನಲ್ಲಿ ಬಸ್‌ ಪಲ್ಟಿ: 18 ಜನ ಸಾವು

Published 2 ಸೆಪ್ಟೆಂಬರ್ 2023, 12:55 IST
Last Updated 2 ಸೆಪ್ಟೆಂಬರ್ 2023, 12:55 IST
ಅಕ್ಷರ ಗಾತ್ರ

ಬಾಗ್ದಾದ್‌: ಇರಾಕ್‌ನಲ್ಲಿ ಶಿಯಾ ಯಾತ್ರಿಗಳಿದ್ದ ಬಸ್‌ ಪಲ್ಟಿಯಾದ ಪರಿಣಾಮ 18 ಜನರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಯಾತ್ರಿಗಳಿದ್ದ ಬಸ್‌ ಕರ್ಬಾಲಕ್ಕೆ ತೆರಳುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಗ್ದಾದ್‌ನಿಂದ ಉತ್ತರಕ್ಕೆ 90 ಕಿ.ಮೀ ದೂರದಲ್ಲಿರುವ ಬಲದ್‌ ಪಟ್ಟಣದ ಸಮೀಪ ಬಸ್‌ ಪಲ್ಟಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಮೃತರಲ್ಲಿ 15 ಪುರುಷರು, ಮೂವರು ಮಹಿಳೆಯರು ಇದ್ದಾರೆ. ಮೃತರ ಪೈಕಿ 10 ಜನ ಇರಾನ್‌ ದೇಶದವರು, ಇಬ್ಬರು ಇರಾಕ್‌ನವರಾಗಿದ್ದು ಉಳಿದವರು ಎಲ್ಲಿಯವರು ಎಂಬ ಮಾಹಿತಿ ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಕರ್ಬಾಲದಲ್ಲಿ ಪ್ರತಿ ವರ್ಷ ನಡೆಯುವ ಅರ್ಬೀನ್ ಶಿಯಾ ಯಾತ್ರೆಯಲ್ಲಿ ಇರಾಕ್‌ ಮಾತ್ರವಲ್ಲದೇ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಇರಾಕ್, ಇರಾನ್‌ ಮತ್ತು ಕೊಲ್ಲಿ ದೇಶಗಳಿಂದ ಯಾತ್ರಾರ್ಥಿಗಳು ಬರುತ್ತಾರೆ, ಅನೇಕರು ಕಾಲ್ನಡಿಗೆಯಲ್ಲಿ ಕರ್ಬಾಲಾಗೆ ಬರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT