ತೈಪೆ: ತೈವಾನ್ ಗಡಿಯಲ್ಲಿ ಚೀನಾದ 32 ಯುದ್ಧ ವಿಮಾನಗಳು ಇರುವುದನ್ನು ತೈವಾನ್ ರಕ್ಷಣಾ ಪಡೆಗಳು ಪತ್ತೆ ಮಾಡಿವೆ ಎಂದು ವರದಿಯಾಗಿದೆ.

ಚೀನಾದ ನಡೆಯಿಂದ ಏಷ್ಯಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಎಎಫ್‌ಬಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ಚೀನಾದ 32 ಯುದ್ಧ ವಿಮಾನಗಳು ತೈವಾನ್ ಗಡಿಯಲ್ಲಿ ಇರುವುದನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ ಸುಮಾರು 20 ಯುದ್ಧ ವಿಮಾನಗಳನ್ನು ಗಡಿಯಲ್ಲಿ ಇರಿಸಲಾಗಿತ್ತು. ಚೀನಾ ನಡೆ ಬಗ್ಗೆ ಜಾಗತಿಕಮಟ್ಟದಲ್ಲಿ ವಿಷಯ ಪ್ರಸ್ತಾಪ ಮಾಡಲಾಗುವುದು ಎಂದು ತೈವಾನ್ ಅಧಿಕಾರಿಗಳು ಹೇಳಿದ್ದಾರೆ.

ಸ್ವತಂತ್ರ ದೇಶವಾಗಿರುವ ತೈವಾನ್ ತನ್ನ ಭೂ ಪ್ರದೇಶ ಎಂದು ಚೀನಾ ಹೇಳುತ್ತಿದೆ. ಹಾಗೇ ತೈವಾನ್ ದೇಶವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ತೈವಾನ್ ಮಿತ್ರ ದೇಶ ಅಮೆರಿಕ ಚೀನಾದ ನಡೆಯನ್ನು ವಿರೋಧಿಸುತ್ತ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.