ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮರುದಿನ (ಜನವರಿ 21ರಂದು) ಕ್ವಾಡ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಯಲಿದೆ. ಇದು ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ, ಹೊಸ ಸರ್ಕಾರದ ಮೊದಲ ಕಾರ್ಯಕ್ರಮವಾಗಲಿದೆ ಶುಕ್ರವಾರ ವರದಿಯಾಗಿದೆ.

ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ಕ್ವಾಡ್ ಸದಸ್ಯ ರಾಷ್ಟ್ರಗಳಾಗಿವೆ.

ಟ್ರಂಪ್ ಅವರು ಸೋಮವಾರ (ಜನವರಿ 20ರಂದು) ಎರಡನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಮತ್ತು ಜಪಾನ್ ವಿದೇಶಾಂಗ ಸಚಿವ ತಕೆಶಿ ಇವಾಯ ಅವರು ಈ ಸಮಾರಂಭದಲ್ಲಿ ತಮ್ಮ ದೇಶಗಳನ್ನು ಪ್ರತಿನಿಧಿಸಲಿದ್ದಾರೆ.

'ಇಂಡೋ–ಪೆಸಿಫಿಕ್ಗೆ ಸಂಬಂಧಿಸಿದಂತೆ ಅಮೆರಿಕ ಹೊಂದಿರುವ ಬದ್ಧತೆಯು ಹೊಸ ಆಡಳಿತದಲ್ಲಿಯೂ ಬದಲಾಗುವುದಿಲ್ಲ' ಎಂಬುದನ್ನು ಸಾರಲು ಕ್ವಾಡ್ ಸಚಿವರ ಸಭೆಗೆ ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ 'ಪೊಲಿಟಿಕೊ' ವರದಿ ಮಾಡಿದೆ.

ಅಮೆರಿಕ ಕಾಂಗ್ರೆಸ್, ಮಾರ್ಕೊ ರುಬಿಯೊ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಿದ್ದು, ಸೋಮವಾರ ಸಂಜೆ ಅವರೂ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
.ಇಸ್ರೇಲ್–ಹಮಾಸ್ ಯುದ್ಧ ವಿರಾಮ: ಬೆನ್ನು ತಟ್ಟಿಕೊಂಡ ಬೈಡನ್–ಟ್ರಂಪ್.ನೀಲಿ ತಾರೆಗೆ ಹಣ: ಟ್ರಂಪ್ ಅರ್ಜಿ ತಿರಸ್ಕರಿಸಿದ ಅಮೆರಿಕ ಸುಪ್ರೀಂ ಕೋರ್ಟ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.