ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜಿರಿಯಾ: ದೋಣಿ ಮಗುಚಿ 24 ಮಂದಿ ಸಾವು

Published 11 ಸೆಪ್ಟೆಂಬರ್ 2023, 12:40 IST
Last Updated 11 ಸೆಪ್ಟೆಂಬರ್ 2023, 12:40 IST
ಅಕ್ಷರ ಗಾತ್ರ

ಅಬುಜಾ, ನೈಜಿರಿಯಾ : ನೈಜಿರಿಯಾದ ಉತ್ತರ ಕೇಂದ್ರ ಭಾಗದಲ್ಲಿ ಭಾನುವಾರ ಪ್ರಯಾಣಿಕರ ದೋಣಿ ಮಗುಚಿದ್ದು, ಕನಿಷ್ಠ 24 ಮಂದಿ ಸತ್ತಿದ್ದಾರೆ. ಮಕ್ಕಳು ಸೇರಿ ಹಲವರು ನಾಪ‍ತ್ತೆಯಾಗಿದ್ದಾರೆ. ದೋಣಿಯಲ್ಲಿ 100ಕ್ಕೂ ಹೆಚ್ಚು ಜನರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಕ್ವಾ ಜಿಲ್ಲೆಯ ನೈಜೆರ್‌ನಲ್ಲಿ ಅವಘಡ ಸಂಭವಿಸಿದೆ. ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಜೈನಬ್ ಸುಲೈಮಾನ್‌ ಪ್ರಕಾರ, ಇದುವರೆಗೂ 24 ಶವಗಳನ್ನು ಹೊರ ತೆಗೆಯಲಾಗಿದೆ. 30 ಜನರನ್ನು ರಕ್ಷಿಸಲಾಗಿದೆ. ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆದಿದೆ.

ದೋಣಿಯ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಜನರನ್ನು ಕರೆದೊಯ್ಯುತ್ತಿದ್ದುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಮೂರು ತಿಂಗಳ ಹಿಂದೆಯೂ ನೈಜಿರಿಯಾದಲ್ಲಿ ದೋಣಿ ಅವಘಡ ಸಂಭವಿಸಿತ್ತು. ಆಗ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT