ಜೋಹಾನಸ್ಬರ್ಗ್: ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದರು. ನಿರ್ಣಾಯಕ ತಂತ್ರಜ್ಞಾನಗಳು ಹಣಕಾಸು ಕೇಂದ್ರಿತವಾಗಿರದೆ ಮಾನವ ಕೇಂದ್ರಿತವಾಗಿರಬೇಕೆಂದು ಬಲವಾಗಿ ಧ್ವನಿ ಎತ್ತಿದರು.

ಜಿ 20 ಶೃಂಗಸಭೆಯ ಮೂರನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಂತ್ರಜ್ಞಾನ ಅನ್ವಯಿಕೆಗಳು ರಾಷ್ಟ್ರಮಟ್ಟಕ್ಕಿಂತ ಜಾಗತಿಕವಾಗಿರಬೇಕು ಮತ್ತು 'ವಿಶೇಷ ಮಾದರಿ'ಗಳಿಗಿಂತ 'ಮುಕ್ತ ಮೂಲ'ವನ್ನು ಆಧರಿಸಿರಬೇಕು ಎಂದು ಹೇಳಿದರು.

ಈ ದೃಷ್ಟಿಕೋನವನ್ನು ಭಾರತದ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿದೆ. ಇದು ಬಾಹ್ಯಾಕಾಶ ಅನ್ವಯಿಕೆಗಳಲ್ಲಿ, ಎಐ ಅಥವಾ ಡಿಜಿಟಲ್ ಪಾವತಿಗಳಲ್ಲಿ ಗಮನಾರ್ಹ ಪ್ರಯೋಜನಗಳಿಗೆ ಕಾರಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು,

‘ಜಾಗತಿಕ ಒಳಿತಿಗಾಗಿ ಎಐ ಬಳಸುವುದನ್ನು ಮತ್ತು ಅದರ ದುರುಪಯೋಗ ತಡೆಯುವುದನ್ನು ನಾವೆಲ್ಲರೂ ಖಚಿತಪಡಿಸಿಕೊಳ್ಳಬೇಕು. ಇದನ್ನು ಮಾಡಲು, ಪರಿಣಾಮಕಾರಿ ಮಾನವ ಮೇಲ್ವಿಚಾರಣೆ, ಸುರಕ್ಷತೆ-ವಿನ್ಯಾಸ, ಪಾರದರ್ಶಕತೆ ಮತ್ತು ಡೀಪ್ಫೇಕ್ಗಳು, ಅಪರಾಧ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಎಐ ಬಳಕೆಯ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳು ಸೇರಿದಂತೆ ಕೆಲವು ಪ್ರಮುಖ ತತ್ವಗಳ ಆಧಾರದ ಮೇಲೆ ನಾವು ಎಐ ಕುರಿತು ಜಾಗತಿಕ ಒಪ್ಪಂದವನ್ನು ರಚಿಸಬೇಕು’ಎಂದು ಮೋದಿ ಹೇಳಿದರು.

ಮಾನವ ಜೀವನ, ಭದ್ರತೆ ಅಥವಾ ಸಾರ್ವಜನಿಕ ನಂಬಿಕೆಯ ಮೇಲೆ ಪರಿಣಾಮ ಬೀರುವ ಎಐ ವ್ಯವಸ್ಥೆಗಳು ಜವಾಬ್ದಾರಿಯುತವಾಗಿರಬೇಕು ಮತ್ತು ಲೆಕ್ಕಪರಿಶೋಧನೆಗೆ ಒಳಪಟ್ಟಿರಬೇಕು ಎಂದು ಪ್ರಧಾನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.