ವಾಷಿಂಗ್ಟನ್: ಉಕ್ರೇನ್ನಲ್ಲಿ ಶಾಂತಿ ಸ್ಥಾಪನೆಗೆ ಅಡ್ಡಿ ಪಡಿಸಿದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 'ಗಂಭೀರ ಪರಿಣಾಮಗಳನ್ನು' ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಪುಟಿನ್ ಹಾಗೂ ಟ್ರಂಪ್ ಅವರು ಅಮೆರಿಕದ ಅಲಸ್ಕಾ ರಾಜ್ಯದಲ್ಲಿ ಶುಕ್ರವಾರ ಸಭೆ ಸೇರಿ, ರಷ್ಯಾ–ಉಕ್ರೇನ್ ಸಂಘರ್ಷ, ಶಾಂತಿ ಸ್ಥಾಪನೆ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಅದಕ್ಕೂ ಮುನ್ನ (ಬುಧವಾರ) ಬರ್ಲಿನ್ಗೆ ಭೇಟಿ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜರ್ಮನ್ ಚಾನ್ಸಲರ್, ಯುರೋಪ್ ಹಾಗೂ ಅಮೆರಿಕದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಯುರೋಪಿಯನ್ ನಾಯಕರು ಮತ್ತು ಝೆಲೆನ್ಸ್ಕಿ ಅವರೊಂದಿಗಿನ ವರ್ಚುವಲ್ ಸಭೆ ಬಳಿಕ ಟ್ರಂಪ್ ಹೇಳಿಕೆ ನೀಡಿದ್ದಾರೆ. ಒಂದು ವೇಳೆ, ಸಂಘರ್ಷ ನಿಲ್ಲಿಸಲು ಪುಟಿನ್ ಒಪ್ಪದಿದ್ದರೆ ರಷ್ಯಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಯೇ ಎಂಬ ಪ್ರಶ್ನೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ, 'ಹೌದು' ಎಂದಿದ್ದಾರೆ.

ಅವು ಯಾವ ರೀತಿಯ ಪರಿಣಾಮಗಳಾಗಿರುತ್ತವೆ ಅಥವಾ ಸುಂಕ ಹೇರಿಕೆಯೇ ಎಂದು ಕೇಳಿದ್ದಕ್ಕೆ, 'ನಾನು ಅದನ್ನು ಹೇಳಬೇಕಾಗಿಲ್ಲ. ಅವು ಅತ್ಯಂತ ಗಂಭೀರ ಪರಿಣಾಮಗಳಾಗಿರುತ್ತವೆ' ಎಂದು ಪ್ರತಿಕ್ರಿಯಿಸಿದ್ದಾರೆ.

ರಷ್ಯಾ ಎದುರಿಸಬೇಕಾಗಬಹುದಾದ ಕೆಟ್ಟ ಪರಿಣಾಮಗಳು ಏನು ಎಂಬುದನ್ನು ಟ್ರಂಪ್ ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಆರ್ಥಿಕ ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದಾಗ್ಯೂ, ಉಕ್ರೇನ್ ಹಾಗೂ ಯುರೋಪ್ ಬೇಡಿಕೆಗಳನ್ನು ರಷ್ಯಾ ಬಲವಾಗಿ ವಿರೋಧಿಸುವ ಸಾಧ್ಯತೆ ಇದೆ.

ಮುಂದಿನ ಸಭೆಗೆ ಝೆಲೆನ್ಸ್ಕಿ ಅವರನ್ನೂ ಸೇರಿಸಿಕೊಳ್ಳುವುದು ಸೇರಿದಂತೆ ತ್ವರಿತವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಕ್ಕೆ ವೇದಿಕೆ ಸಜ್ಜುಗೊಳಿಸುವುದು ಪುಟಿನ್ ಜೊತೆಗಿನ ಸಭೆಯ ಉದ್ದೇಶ ಎಂದು ಟ್ರಂಪ್ ವಿವರಿಸಿದ್ದಾರೆ.

'ಎಲ್ಲವೂ ಅಂದುಕೊಂಡಂತೆ ಆದರೆ, ಬೇಗನೆ ಮತ್ತೊಂದು ಸಭೆ ಆಯೋಜನೆಗೊಳ್ಳಲಿದೆ. ಆದಷ್ಟು ಬೇಗನೆ ಆ ಸಭೆ ನಡೆಸಲು ಬಯಸುತ್ತೇನೆ. ಪುಟಿನ್ ಹಾಗೂ ಝೆಲೆನ್ಸ್ಕಿ ನನ್ನನ್ನು ಆಹ್ವಾನಿಸಿದರೆ, ಮೂವರೂ ಶೀಘ್ರವೇ ಸಭೆ ನಡೆಸುತ್ತೇವೆ' ಎಂದಿದ್ದಾರೆ. ಆದರೆ, ಆ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ.
.ಟ್ರಂಪ್–ಪುಟಿನ್ ಶೃಂಗಸಭೆಗೂ ಮುನ್ನ ಬರ್ಲಿನ್ಗೆ ಭೇಟಿ ನೀಡಲಿರುವ ಝೆಲೆನ್ಸ್ಕಿ.ವಿಶ್ವಸಂಸ್ಥೆಯ ಸಾಮಾನ್ಯ ಸಭೆ: ಮೋದಿ–ಟ್ರಂಪ್ ಭೇಟಿ, ದ್ವಿಪಕ್ಷೀಯ ಮಾತುಕತೆ ಸಾಧ್ಯತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.