ಢಾಕಾ: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ನೀಲ ನಕ್ಷೆಯ ವಿವರಗಳನ್ನು ಚುನಾವಣಾ ಆಯೋಗವು ಇದೇ ವಾರದಲ್ಲಿ ಪ್ರಕಟಿಸಲಿದೆ.

ಬಾಂಗ್ಲಾದೇಶ ಚುನಾವಣಾ ಆಯೋಗದ ಹಿರಿಯ ಕಾರ್ಯದರ್ಶಿ ಅಖ್ತರ್ ಅಹ್ಮದ್ ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ್ದಾರೆ. ಚುನಾವಣಾ ರೂಪುರೇಷೆ ಸಂಬಂಧಿಸಿದ ಕರಡು ಪ್ರತಿ ಈಗಾಗಲೇ ಸಿದ್ಧವಾಗಿದ್ದು, ಆಯೋಗದ ಅಂತಿಮ ಅನುಮತಿಗಾಗಿ ಶೀಘ್ರವೇ ಸಲ್ಲಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಕ್ರಿಯಾ ಯೋಜನೆಯು ಆಂತರಿಕ ಸಹಕಾರ ಹಾಗೂ ಚುನಾವಣಾ ಸಂಬಂಧಿತ ಕಾರ್ಯಾಚರಣೆಗಳ ಸಮಸ್ಯೆಗಳನ್ನು ಕೇಂದ್ರೀಕರಿಸಲಿದೆ. ವಾರದ ಒಳಗೆ ಯೋಜನೆಯ ಸಿದ್ದತೆಯನ್ನು ಅಂತಿಮವಾಗಿ ಪರಿಶೀಲಿಸಿ, ಪ್ರಕಟಿಸಲು ಸಿದ್ಧತೆ ನಡೆದಿದೆ ಎಂದಿದ್ದಾರೆ.

ಜತೆಗೆ, ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಂಬಂಧಪಟ್ಟ ಇಲಾಖೆಗಳು ಸಿದ್ಧತೆಗಳನ್ನು ಕೈಗೊಂಡಿವೆ ಎಂದೂ ಅಖ್ತರ್ ಮಾಹಿತಿ ನೀಡಿದ್ದಾರೆ.

ಬಾಂಗ್ಲಾದಲ್ಲಿ ಫೆಬ್ರವರಿಯಲ್ಲೂ ಚುನಾವಣೆ ನಡೆಯುವ ಬಗ್ಗೆ ಕೆಲ ರಾಜಕೀಯ ಪಕ್ಷಗಳ ನಾಯಕರು ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಅಖ್ತರ್ ಅವರು ಈ ಮಾಹಿತಿ ನೀಡಿರುವುದು ಪ್ರಾಮುಖ್ಯತೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.