ಢಾಕಾ: ಚೀನಾದಲ್ಲಿ ನೆಲೆಸಿರುವ171 ಬಾಂಗ್ಲಾದೇಶಿ ನಾಗರಿಕರನ್ನು ಕರೆತರುವ ಅಲ್ಲಿನ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಚೀನಾಗೆ ತೆರಳಲು ವಿಮಾನದ ಸಿಬ್ಬಂದಿ ನಿರಾಕರಿಸಿದ್ದರಿಂದ ರಕ್ಷಣಾ ಕಾರ್ಯಚರಣೆಯನ್ನು ಮೊಟಕುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಬಾಂಗ್ಲಾದೇಶಿ ಸರ್ಕಾರಿ ವಿಮಾನಯಾನ ಸಂಸ್ಥೆ ಬಿಮನ್ಫೆಬ್ರವರಿ 1ರಂದುಕೊರೊನಾ ಪೀಡಿತ ಚೀನಾರಿಂದ 312 ನಾಗರಿಕರನ್ನು ಕರೆತಂದಿತ್ತು. ಆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿಮಾನ ಸಿಬ್ಬಂದಿ ಕೊರೊನ ವೈರಸ್‌ನ ಭಯದಲ್ಲಿ ಇದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಸೋಂಕಿಗೆ ಈ ವರೆಗೆ ಒಟ್ಟು 811 ಜನರು ಮೃತರಾಗಿದ್ದು, 37,200 ಜನರಿಗೆ ಸೋಂಕು ತಗಲಿರುವುದಾಗಿ ವರದಿಯಾಗಿದೆ.

ನಮಗೆ ವಿಮಾನವನ್ನು ಕಳುಹಿಸಲು ಸಮಸ್ಯೆಯಾಗುತ್ತಿದೆ, ವಿಮಾನದ ಸಿಬ್ಬಂದಿ ಚೀನಾಗೆ ತೆರಳಲು ಒಪ್ಪುತ್ತಿಲ್ಲ ಎಂದು ಬಾಂಗ್ಲಾದೇಶದ ವಿದೇಶಾಂಗ ಮಂತ್ರಿ ಅಬ್ದುಲ್ ಮೂಮಿನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.