ಢಾಕಾ: ರಕ್ಷಣೆ, ವಿದೇಶಾಂಗ ಇಲಾಖೆ ಒಳಗೊಂಡಂತೆ 27 ಇಲಾಖೆಗಳನ್ನು ನೋಡಿಕೊಳ್ಳಲು ಸಲಹಾ ಮಂಡಳಿಯನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನಾಯಕ ಮಹಮ್ಮದ್ ಯೂನಸ್ ನೇಮಿಸಿದ್ದಾರೆ.

ವಿವಾದಿತ ಮೀಸಲಾತಿ ವಿಷಯವಾಗಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಪ್ರಕ್ಷುಬ್ಧಗೊಂಡಿರುವ ಬಾಂಗ್ಲಾದೇಶದಲ್ಲಿ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶದಿಂದ ಪಲಾಯನಗೈದಿದ್ದಾರೆ. ರಾಷ್ಟ್ರಪತಿ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ 84 ವರ್ಷದ ನೊಬೆಲ್ ಪುರಸ್ಕೃತ ಯೂನಸ್ ಅವರನ್ನು ನೇಮಿಸಿದ್ದಾರೆ.
.Bangla Unrest: ಭಾರತಕ್ಕೆ ಮರಳಿದವರ ಬಗ್ಗೆ ರಾಜ್ಯಸಭೆಗೆ ಸರ್ಕಾರ ಮಾಹಿತಿ.Bangla Unrest | ನಾಗರಿಕರ ಸುರಕ್ಷತೆಗೆ ಆದ್ಯತೆ: ಮೊಹಮ್ಮದ್ ಯೂನಸ್.
ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ಯೂನಸ್ ಅವರು ಸಲಹಾ ಮಂಡಳಿ ರಚಿಸಿದ್ದಾರೆ. ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಯೂನಸ್ ನೇಮಕಗೊಂಡಿದ್ದಾರೆ. ಇದು ಪ್ರಧಾನಿ ಹುದ್ದೆಗೆ ಸರಿಸಮನಾದುದು. ಸೇನೆ, ನಾಗರಿಕ ಸಮಾಜ ಪ್ರತಿನಿಧಿಗಳು ಒಳಗೊಂಡಂತೆ ಸಲಹಾ ಮಂಡಳಿಯ ಸದಸ್ಯರನ್ನು ವಿದ್ಯಾರ್ಥಿ ಸಂಘಟನೆಗಳೊಂದಿಗೆ ಚರ್ಚಿಸಿ ಯೂನಸ್ ನೇಮಕ ಮಾಡಿದ್ದಾರೆ ಎಂದೆನ್ನಲಾಗಿದೆ.

ಅಧಿಕೃತ ಮಾಹಿತಿ ಪ್ರಕಾರ, ಸೇನೆ, ಸಾರ್ವಜನಿಕ ಆಡಳಿತ, ಶಿಕ್ಷಣ, ಇಂಧನ, ಆಹಾರ, ಜಲ ಸಂಪನ್ಮೂಲ ಹಾಗೂ ಮಾಹಿತಿ ಸಚಿವಾಲಯಗಳನ್ನು ಯೂನಸ್ ಅವರು ತಾವೇ ನೇರ ನಿರ್ವಹಣೆ ಮಾಡುವ ಹೊಣೆ ಹೊತ್ತಿದ್ದಾರೆ. ವಿದೇಶಾಂಗ ಇಲಾಖೆ ಮಾಜಿ ಕಾರ್ಯದರ್ಶಿ ಹುಸೈನಿ ಅವರಿಗೆ ವಿದೇಶಾಂಗ ಸಚಿವಾಲಯ, ಸೇನೆಯ ನಿವೃತ್ತ ಬ್ರಿಗೇಡಿಯರ್ ಜನರ್ ಎಂ. ಶೇಖಾವತ್ ಹುಸೈನ್ ಅವರಿಗೆ ಗೃಹ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
.Bangla Unrest | ಢಾಕಾಗೆ ಬಂದ ಯೂನಸ್; ವಿದ್ಯಾರ್ಥಿಗಳಿಂದ ಉಳಿದ ದೇಶ ಎಂದು ಬಣ್ಣನೆ.Bangla unrest: ಅವಾಮಿ ಲೀಗ್ ಪಕ್ಷದ 29 ನಾಯಕರ, ಕುಟುಂಬ ಸದಸ್ಯರ ಮೃತದೇಹ ಪತ್ತೆ.
ಹುಸೈನ್ ಅವರು ಕೊಲ್ಕತ್ತದಲ್ಲಿರುವ ಬಾಂಗ್ಲಾದೇಶದ ರಾಯಭಾರ ಕಚೇರಿಯಲ್ಲಿ 2001ರಿಂದ 2005ರವರೆಗೆ ಉಪ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದರು. 2006ರಿಂದ 2009ರವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು.

ಬಾಂಗ್ಲಾದೇಶ ಬ್ಯಾಂಕ್‌ನ ಗವರ್ನರ್ ಆಗಿದ್ದ ಸಲಾವುದ್ದೀನ್ ಅಹ್ಮದ್ ಅವರು ಹಣಕಾಸು ಹಾಗೂ ಯೋಜನಾ ಮಂತ್ರಾಲಯದ ಉಸ್ತುವಾರಿಯಾಗಿದ್ದಾರೆ. ಮಾಜಿ ಅಟಾರ್ನಿ ಜನರಲ್ ಎ.ಎಫ್. ಹಸನ್ ಆರಿಫ್ ಅವರಿಗೆ ಸ್ಥಳೀಯ ಆಡಳಿತ ಮಂತ್ರಾಲಯದ ಜವಾಬ್ದಾರಿ ನೀಡಲಾಗಿದೆ.
.Bangla Unrest | ಹಸೀನಾಗೆ ಭಾರತದ ನೆರವು: ಕೇಂದ್ರ.Bangla | ಅವಾಮಿ ಲೀಗ್ ನಾಯಕನ ಹೋಟೆಲ್ನಲ್ಲಿ ಬೆಂಕಿ ಹಚ್ಚಿ 24 ಮಂದಿಯ ಹತ್ಯೆ.
ಸರ್ಕಾರದ ತಾರತಮ್ಯ ನೀತಿ ವಿರುದ್ಧ ಸಮರ ಸಾರಿದ್ದ ವಿದ್ಯಾರ್ಥಿ ಸಂಘಟನೆಯ ಇಬ್ಬರು ನಾಯಕರಾದ ಎಂ. ನಹೀದ್ ಇಸ್ಲಾಂ ಹಾಗೂ ಆಸಿಫ್ ಮಹಮ್ಮದ್ ಅವರನ್ನೂ ಈ ಸಲಹಾ ಮಂಡಳಿಗೆ ಯೂನಸ್ ಸೇರಿಸಿಕೊಂಡಿದ್ದು, ಅವರಿಗೆ ಕ್ರಮವಾಗಿ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಯುವ ಹಾಗೂ ಕ್ರೀಡಾ ಮಂತ್ರಾಲಯ ಉಸ್ತುವಾರಿ ವಹಿಸಿದೆ.

ಬಾಂಗ್ಲಾದೇಶದಲ್ಲಿ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನಿಯಮವನ್ನು ಪರಿಷ್ಕರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಜುಲೈನಲ್ಲಿ ಪ್ರತಿಭಟನೆ ಆರಂಭಿಸಿದರು. ಹೋರಾಟ ತೀವ್ರಗೊಂಡಿದ್ದರಿಂದ, ಹಿಂಸಾಚಾರ ಹೆಚ್ಚಾಗಿತ್ತು. ಇದರಿಂದಾಗಿ 15 ವರ್ಷಗಳ ಅವರ (ಹಸೀನಾ) ಆಡಳಿತಕ್ಕೆ ರಾಜೀನಾಮೆ ಮೂಲಕ ತೆರೆ ಬಿದ್ದಿತು. ಇದರ ಬೆನ್ನಲ್ಲೇ ಮಧ್ಯಂತರ ಸರ್ಕಾರ ರಚನೆಗೊಂಡಿತು. ಇದಕ್ಕೆ ಸೇನೆಯ ಸಹಕಾರವೂ ಇದೆ.

ದೇಶದ ರಾಜಧಾನಿ ಢಾಕಾದಲ್ಲಿರುವ ರಾಷ್ಟ್ರಪತಿ ಅವರ ಅರಮನೆ ವಂಗಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭ ಗುರುವಾರ ನಡೆಯಿತು. ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಮೂವರು ಸಲಹೆಗಾರರು ಗೈರಾಗಿದ್ದರು.
.Bangla Unrest: ಬಾಂಗ್ಲಾದ ಸರ್ಕಾರಿ ನೌಕರರಲ್ಲಿ ಮನೆ ಮಾಡಿದ ಆತಂಕ.ಬಾಂಗ್ಲಾ ಆಂತರಿಕ ಕದನ: ಮಂಗಳೂರಿಗೂ ತಟ್ಟಿದೆ ರೋದನದ ಬಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.