ಗೂಗಲ್ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ಪತ್ನಿ ನಿಕೋಲ್ ಶನಹನ್ ಜೊತೆ ಟೆಸ್ಲಾ ಕಂಪೆನಿ ಸಿಇಒ ಇಲಾನ್ ಮಸ್ಕ್ ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ಸಂಬಂಧ ಹೊಂದಿದ್ದರು ಎಂದು ವರದಿಗಳು ಪ್ರಕಟವಾಗಿದ್ದವು. ಆದರೆ, ಇವುಗಳನ್ನು ಮಸ್ಕ್ ಅಲ್ಲಗಳೆದಿದ್ದಾರೆ.

ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಮಸ್ಕ್, ಇವು ಸಂಪೂರ್ಣವಾಗಿ ಆಧಾರರಹಿತವಾದವರದಿಗಳು ಎಂದಿದ್ದಾರೆ.

'ಇದು ಸಂಪೂರ್ಣ ಆಧಾರರಹಿತವಾಗಿದೆ. ಸೆರ್ಗೆ ಮತ್ತು ನಾನು ಸ್ನೇಹಿತರು. ಕಳೆದ ರಾತ್ರಿ ಒಟ್ಟಿಗೆ ಪಾರ್ಟಿಯಲ್ಲಿದ್ದೆವು. ನಾನು ನಿಕೋಲ್ ಅವರನ್ನು ಕಳೆದ ಮೂರು ವರ್ಷಗಳಲ್ಲಿ ಕೇವಲ ಎರಡು ಬಾರಿ ನೋಡಿದ್ದೇನೆ. ಎರಡೂ ಸಲ ಸಾಕಷ್ಟು ಜನರು ನಮ್ಮ ಸುತ್ತಲೂ ಇದ್ದರು. ರೊಮ್ಯಾಂಟಿಕ್ ಎನ್ನುವಂತಹದ್ದೇನು ಇಲ್ಲ' ಎಂದು ಬರೆದಿದ್ದಾರೆ.

ಮಸ್ಕ್ ಹಾಗೂ ಶನಹನ್ ಅವರು ಮಿಯಾಮಿಯಲ್ಲಿ ಸ್ವಲ್ಪ ಸಮಯ ಸಂಬಂಧದಲ್ಲಿದ್ದರು. ಇದರಿಂದಾಗಿ ಬ್ರಿನ್ ಅವರು, ವಿಚ್ಛೇದನ ಪಡೆಯಲು ಜನವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧವು ಮಸ್ಕ್ ಮತ್ತು ಬ್ರಿನ್ ನಡುವಿನ ಸ್ನೇಹವನ್ನೂ ಕೊನೆಗೊಳಿಸಿದೆ ಎಂದುವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಮಸ್ಕ್–ಶನಹನ್ ಸಂಬಂಧವಿದ್ದ ಸಮಯದಲ್ಲಿ ಬ್ರಿನ್ ದಂಪತಿ ಬೇರ್ಪಟ್ಟಿದ್ದರು. ಆದರೆ, ಒಟ್ಟಿಗೆ ವಾಸವಿದ್ದರು ಎಂದು ಬಲ್ಲ ಮೂಲಗಳು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ.

ಈ ವರ್ಷಾರಂಭದಲ್ಲಿ ನಡೆದ ಪಾರ್ಟಿಯೊಂದರಲ್ಲಿಮಸ್ಕ್ ಹಾಗೂ ಶನಹನ್ ಅವರು ತಮ್ಮ ತಪ್ಪಿಗೆ ಬ್ರಿನ್ ಬಳಿ ಕ್ಷಮೆ ಯಾಚಿಸಿದ್ದಾರೆ. ಆದಾಗ್ಯೂ, ಮಸ್ಕ್ ಅವರಿಗೆ ಸೇರಿದ ಕಂಪೆನಿಗಳಲ್ಲಿರುವ ತಮ್ಮ ವೈಯಕ್ತಿಕ ಹೂಡಿಕೆಯನ್ನು ಮಾರಾಟ ಮಾಡುವಂತೆ ಬ್ರಿನ್, ಆರ್ಥಿಕ ಸಲಹೆಗಾರರಿಗೆ ಸೂಚಿಸಿದ್ದರು. 2008ರಲ್ಲಿ ಟೆಸ್ಲಾ ಆರ್ಥಿಕವಾಗಿ ಹಿನ್ನಡೆ ಅನುಭವಿಸಿ, ಮಸ್ಕ್ ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಬ್ರಿನ್, ಟೆಸ್ಲಾಗೆ ಹಣಕಾಸಿನ ನೆರವು ನೀಡಿದ್ದರು ಎಂದೂ ವರದಿಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.