ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನಲ್ಲಿನ ಅಲ್–ಜಜೀರಾ ಚಾನಲ್ ಕಚೇರಿ ಮುಚ್ಚಲು ನೇತನ್ಯಾಹು ಸರ್ಕಾರ ನಿರ್ಧಾರ

Published 5 ಮೇ 2024, 13:00 IST
Last Updated 5 ಮೇ 2024, 13:00 IST
ಅಕ್ಷರ ಗಾತ್ರ

ಟೆಲ್ ಅವಿವ್‌: ಕತಾರ್ ಮಾಲೀಕತ್ವದ ಅಲ್‌–ಜಜೀರಾ ಸುದ್ದಿವಾಹಿನಿಯ ಸ್ಥಳೀಯ ಕಚೇರಿಗಳನ್ನು ಮುಚ್ಚಲು ಸರ್ಕಾರ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್‌ ತಾಣದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಯಾವಾಗಿನಿಂದ ಈ ನಿರ್ಧಾರ ಜಾರಿಗೆ ಬರಲಿದೆ. ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮುಚ್ಚಲಾಗುತ್ತದೆಯೋ ಎನ್ನುವುದರ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ.

ಈ ಕ್ರಮದಿಂದಾಗಿ ಅಲ್‌–ಜಜೀರಾ ಮತ್ತು ಇಸ್ರೇಲ್ ನಡುವಿನ ದೀರ್ಘಕಾಲಿನ ಕಲಹ ಮತ್ತೊಂದು ಹಂತ ತಲುಪಿದೆ. ಅಲ್–ಜಜೀರಾ ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂದು ಇಸ್ರೇಲ್ ಪದೇ ಪದೇ ಆರೋಪಿಸುತ್ತಾ ಬಂದಿತ್ತು.

ಗಾಜಾ ಯುದ್ಧಭೂಮಿಯಲ್ಲಿ ವರದಿ ಮಾಡುತ್ತಿರುವ ಕೆಲವು ವಾಹಿನಿಗಳ ಪೈಕಿ ಅಲ್‌–ಜಜೀರಾವೂ ಒಂದು. ಗಾಜಾದಲ್ಲಿ ಇಸ್ರೇಲ್‌ನ ಬಾಂಬ್‌ ದಾಳಿ, ಜನರಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳ ಬಗ್ಗೆ ವಾಹಿನಿ ವರದಿ ಮಾಡಿತ್ತು. ಹೀಗಾಗಿ ಹಮಾಸ್‌ ಜೊತೆ ವಾಹಿನಿ ಒಪ್ಪಂದ ಮಾಡಿಕೊಂಡಿದೆ ಎಂದು ಇಸ್ರೇಲ್ ದೂರಿತ್ತು.

ಇಸ್ರೇಲ್ ಸರ್ಕಾರದ ಈ ಕ್ರಮದ ಬಗ್ಗೆ ತಕ್ಷಣದ ಪ್ರತಿಕ್ರಿಯೆಗೆ ವಾಹಿನಿ ಲಭ್ಯವಾಗಿಲ್ಲ.

ಅಲ್‌–ಜಜೀರಾಗೆ ಕತಾರ್ ಸರ್ಕಾರ ಬಂಡವಾಳ ಹೂಡಿದೆ. ಅರೆಬಿಕ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸುದ್ದಿ ಪ್ರಸಾರ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT