ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದ ಮೂಲಕ ಪ್ಯಾಲೆಸ್ಟೀನಿಯನ್ನರಿಗೆ ನೆರವು: ಬೈಡನ್

Published 2 ಮಾರ್ಚ್ 2024, 13:32 IST
Last Updated 2 ಮಾರ್ಚ್ 2024, 13:32 IST
ಅಕ್ಷರ ಗಾತ್ರ

ವಾಷಿಂಗ್ಟನ್: ಗಾಜಾದಲ್ಲಿ ಅಗತ್ಯ ನೆರವು ವಸ್ತುಗಳನ್ನು ವಿಮಾನದಿಂದ ಕೆಳಕ್ಕೆ ಹಾಕುವ ಕೆಲಸವನ್ನು ಅಮೆರಿಕವು ಆರಂಭಿಸಲಿದೆ ಎಂದು ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಅಗತ್ಯ ವಸ್ತುಗಳನ್ನು ಅವುಗಳನ್ನು ಹೊತ್ತು ತಂದ ವಾಹನಗಳಿಂದ ಪಡೆಯಲು ಪ್ಯಾಲೆಸ್ಟೀನ್ ನಾಗರಿಕರು ಭಾರಿ ಸಂಖ್ಯೆಯಲ್ಲಿ ಮುಗಿಬಿದ್ದ ಸಂದರ್ಭದಲ್ಲಿ ಇಸ್ರೇಲ್ ಸೈನಿಕರು ಗುರುವಾರ ಅವರ ಮೇಲೆ ಗುಂಡು ಹಾರಿಸಿದರು. ಆಗ ಕನಿಷ್ಠ 115 ಮಂದಿ ಪ್ಯಾಲೆಸ್ಟೀನಿಯನ್ನರು ಜೀವ ಕಳೆದುಕೊಂಡಿದ್ದಾರೆ, 750ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಹಮಾಸ್‌ನ ಆರೋಗ್ಯ ಸಚಿವಾಲಯ ಹೇಳಿದೆ.

ಈ ಘಟನೆ ನಡೆದ ನಂತರದಲ್ಲಿ ಅಮೆರಿಕವು ನೆರವು ವಸ್ತುಗಳನ್ನು ವಿಮಾನದಿಂದ ಕೆಳಕ್ಕೆ ಹಾಕುವ ಘೋಷಣೆ ಮಾಡಿದೆ. ಅಮೆರಿಕವು ನೆರವು ವಸ್ತುಗಳನ್ನು ತಲುಪಿಸುವ ಕೆಲಸವನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ ಎಂದು ಬೈಡನ್ ಹೇಳಿದ್ದಾರೆ. 

ನೆರವು ವಸ್ತುಗಳನ್ನು ಪ್ಯಾಲೆಸ್ಟೀನ್‌ ಜನರಿಗೆ ತಲುಪಿಸಲು ಸಮುದ್ರ ಮಾರ್ಗದ ಬಳಕೆ ಸೇರಿದಂತೆ ಇತರ ಸಾಧ್ಯತೆಗಳ ಬಗ್ಗೆಯೂ ಅಮೆರಿಕ ಪರಿಶೀಲಿಸಲಿದೆ ಎಂದು ಬೈಡನ್ ಅವರು ಪ್ರಕಟಿಸಿದ್ದಾರೆ.

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರಿಗೆ ಶ್ವೇತಭವನದಲ್ಲಿ ಆತಿಥ್ಯ ನೀಡುವ ಸಂದರ್ಭದಲ್ಲಿ ಬೈಡನ್ ಈ ಘೋಷಣೆ ಮಾಡಿದರು.

ಮಿಲಿಟರಿ ಸಿಬ್ಬಂದಿಯನ್ನು ಬಳಸಿ, ಅಗತ್ಯ ವಸ್ತುಗಳನ್ನು ವಿಮಾನಗಳಿಂದ ಕೆಳಕ್ಕೆ ಎಸೆಯುವ ಸಾಧ್ಯತೆಯ ಬಗ್ಗೆ ಅಮೆರಿಕದ ಅಧಿಕಾರಿಗಳು ತಿಂಗಳುಗಳಿಂದ ಪರಿಶೀಲಿಸುತ್ತಿದ್ದಾರೆ. ಆದರೆ, ಈ ರೀತಿ ಮಾಡಿದಾಗ ನೆರವು ವಸ್ತುಗಳು ನಾಗರಿಕರಿಗೇ ಸಿಗುತ್ತವೆ ಎಂಬ ಖಾತರಿ ಇಲ್ಲದ ಕಾರಣ ಆ ಆಲೋಚನೆಯನ್ನು ಅನುಷ್ಠಾನಕ್ಕೆ ತಂದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT