ಇದರ ಬೆನ್ನಲ್ಲೇ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಬೈಡನ್ ಅವರ ರಾಷ್ಟ್ರೀಯ ಭದ್ರತಾ ತಂಡವು, ದಾಳಿಯ ರೂಪುರೂಷೆಗಳನ್ನು ಒಳಗೊಂಡ ಯೋಜನೆಯನ್ನು ಬೈಡನ್ ಅವರ ಎದುರು ಪ್ರಸ್ತುತ ಪಡಿಸಿತು. ಭಯೋತ್ಪಾದಕ ಸಂಘಟನೆಯ ಮೂರು ನೆಲೆಗಳ ಮೇಲೆ ದಾಳಿ ನಡೆಸಲು ಬೈಡನ್ ಆದೇಶಿಸಿದರು. ಬಳಿಕ ಮಂಗಳವಾರ ಮುಂಜಾನೆ 4.45ರ ಸುಮಾರಿಗೆ ಇರಾಕ್‌ನಲ್ಲಿ ಅಮೆರಿಕ ವಾಯುದಾಳಿ ನಡೆಸಿತು.