ಟೆಲ್ ಅವೀವ್ : ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಮಂಗಳವಾರ ಇಸ್ರೇಲ್ಗೆ ಭೇಟಿ ನೀಡಿದರು.

ಹಮಾಸ್–ಇಸ್ರೇಲ್ ಸಂಘರ್ಷ ಆರಂಭವಾದ ನಂತರ ಬ್ಲಿಂಕೆನ್ ಅವರ 11ನೇ ಭೇಟಿ ಇದಾಗಿದೆ.

ಹಿಜ್ಬುಲ್ಲಾ ಉಗ್ರ ಸಂಘಟನೆಯು ಇಸ್ರೇಲ್ ಮೇಲೆ ರಾಕೆಟ್, ಕ್ಷಿಪಣಿ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಬ್ಲಿಂಕೆನ್ ಉಕ್ರೇನ್ಗೆ ಭೇಟಿ ನೀಡಿದ್ದಾರೆ.

ಬ್ಲಿಂಕೆನ್ ಅವರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇತರ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆ ಇದೆ. ನಂತರ ಜೋರ್ಡನ್, ಸೌದಿ ಅರೇಬಿಯಾ, ಕತಾರ್, ಯುಎಇಗೆ ಭೇಟಿ ನೀಡಲಿದ್ದಾರೆ.

ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಬೇಕಿರುವ ಅಗತ್ಯ ಹಾಗೂ ಒತ್ತೆಯಾಳುಗಳ ಬಿಡುಗಡೆ ಬಗ್ಗೆ ಬ್ಲಿಂಕೆನ್ ಚರ್ಚೆ ನಡೆಸಲಿದ್ದಾರೆ ಎಂದು ವಕ್ತಾರ ಮ್ಯಾಥ್ಯು ಮಿಲ್ಲರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಹತ್ಯೆ ನಂತರ, ಕದನ ವಿರಾಮ ಘೋಷಣೆಗೆ ಅಮೆರಿಕ ಮತ್ತೆ ಯತ್ನಿಸುತ್ತಿದೆ. ಆದರೆ ಇಸ್ರೇಲ್–ಹಮಾಸ್ ಎರಡೂ ದಾಳಿ–ಪ್ರತಿದಾಳಿಯ ಮಾತನಾಡುತ್ತಿರುವುದು ಅಮೆರಿಕ ಪ್ರಯತ್ನಕ್ಕೆ ಹಿನ್ನಡೆ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.