ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್‌–ಹಮಾಸ್ ಕದನ ವಿರಾಮಕ್ಕೆ ಸಕಾಲ: ಆ್ಯಂಟನಿ ಬ್ಲಿಂಕನ್‌

Published 1 ಮೇ 2024, 13:56 IST
Last Updated 1 ಮೇ 2024, 13:56 IST
ಅಕ್ಷರ ಗಾತ್ರ

ಟೆಲ್‌ ಅವಿವ್‌ (ಇಸ್ರೇಲ್‌): ಇಸ್ರೇಲ್‌–ಹಮಾಸ್‌ ನಡುವೆ ಕದನ ವಿರಾಮ ಘೋಷಿಸುವ ಸಂಬಂಧ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಬುಧವಾರವೂ ಇಸ್ರೇಲ್‌ ನಾಯಕರೊಂದಿಗೆ ಸಭೆ ನಡೆಸಿದರು.

ಈ ವೇಳೆ ಅವರು, ಏಳು ತಿಂಗಳಿನಿಂದ ನಡೆಯುತ್ತಿರುವ ಯುದ್ಧಕ್ಕೆ ವಿರಾಮ ಘೋಷಿಸಲು ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಇದು ಸಕಾಲ ಎಂದು ಒತ್ತಿ ಹೇಳಿದರು.

ಸದ್ಯ, ಕದನ ವಿರಾಮದ ಕುರಿತು ಗಂಭೀರ ಮಾತುಕತೆ ನಡೆಯುತ್ತಿದ್ದು, ಯುದ್ಧ ಅಂತ್ಯವಾಗಬೇಕೇ ಅಥವಾ ಇಲ್ಲವೇ ಎಂಬ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗುತ್ತಿಲ್ಲ. ಒಪ್ಪಂದದಿಂದ ಗಾಜಾಕ್ಕೆ ಆಹಾರ, ಔಷಧ ಮತ್ತು ನೀರು ಲಭ್ಯವಾಗುತ್ತದೆ ಎಂದು ಹೇಳಿದರು.  

ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡವರ ಕುಟುಂಬಸ್ಥರ ಜೊತೆ ಮಾತನಾಡಿದ ಅವರು, ‘ಪ್ರಸ್ತಾವವೊಂದನ್ನು ಇಡಲಾಗಿದೆ. ಅದಕ್ಕೆ ಹಮಾಸ್‌ ಒಪ್ಪಿಕೊಳ್ಳುವುದಷ್ಟೇ ಬಾಕಿ ಇದೆ. ನಿಮ್ಮ ಪ್ರೀತಿಪಾತ್ರರನ್ನು ನಿಮ್ಮೊಂದಿಗೆ ಸೇರಿಸುವ ತನಕ ನಾವು ವಿಶ್ರಮಿಸುವುದಿಲ್ಲ. ಇದು ನಮ್ಮ ದೃಢನಿರ್ಧಾರ’ ಎಂದು ಹೇಳಿದರು.

 ಬ್ಲಿಂಕನ್‌ ಅವರು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಮತ್ತು ಅವರ ಸಂಪುಟ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT