ರಿಯೊ ಡಿ ಜನೈರೊ: ಬ್ರೆಜಿಲ್ ತನ್ನ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ ಎಂದು ಆ ದೇಶದ ರಾಷ್ಟ್ರೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಐಎನ್ಪಿಇ) ಬುಧವಾರ ತಿಳಿಸಿದೆ.

ಐಎನ್ಪಿಇ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಉಪಗ್ರಹಕ್ಕೆ ಅಮೆಜಾನಿಯಾ–1 ಎಂದು ಹೆಸರಿಡಲಾಗಿದ್ದು, ಫೆಬ್ರುವರಿ 28ರಂದು ಭಾರತದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು. ಇದು ಬ್ರೆಜಿಲ್ನ ಮೂರನೇ ದೂರ ಸಂವೇದಿ ಉಪಗ್ರಹವಾಗಲಿದೆಎಂದು ಮಾಹಿತಿ ನೀಡಿದೆ.

ಈ ಹಿಂದೆ ಚೀನಾ ಸಹಯೋಗದಲ್ಲಿ ಸಿಬಿಇಆರ್ಎಸ್–4 ಮತ್ತು ಸಿಬಿಇಆರ್ಎಸ್–4ಎ ಉಪಗ್ರಹಗಳನ್ನು ನಿರ್ಮಿಸಿತ್ತು.

ಇದು ಧ್ರುವೀಯ ಕಕ್ಷೆಯಲ್ಲಿ ಮಾತ್ರವೇ ಸುತ್ತುವ ಉಪಗ್ರಹವಾಗಿದ್ದು, ಪ್ರತಿ ಐದು ದಿನಕ್ಕೊಮ್ಮೆ ಭೂಮಿಯ ಚಿತ್ರಗಳನ್ನು ರವಾನಿಸಲಿದೆ. ಅಮೆಜಾನ್ ಮಿಷನ್ ಯೋಜನೆಯ ಭಾಗವಾಗಿ ನಾಲ್ಕುವರ್ಷ ಕಾರ್ಯಾಚರಿಸಲಿರುವ ಈ ಉಪಗ್ರಹ, ವಿಶ್ವದ ಅತಿದೊಡ್ಡ ಮಳೆಕಾಡು ಅಮೆಜಾನ್ನ ಮೇಲ್ವಿಚಾರಣೆ ಮತ್ತು ಅರಣ್ಯ ನಾಶಕ್ಕೆ ಸಂಬಂಧಿಸಿದ ದೂರ ಸಂವೇದಿ ಮಾಹಿತಿಯನ್ನೂ ಒದಗಿಸಲಿದೆ.

ಉಪಗ್ರಹದ ಸಂಯೋಜನೆ ಮತ್ತು ಪರೀಕ್ಷಾ ಕಾರ್ಯಗಳನ್ನು ಸಾವೊ ಪಾಲೋದಲ್ಲಿರುವಐಎನ್ಪಿಇ ಪ್ರಯೋಗಾಲಯದಲ್ಲಿ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.