ಮೊಂನ್ಕೋಲ್ ಬೋರೆ (ಕಾಂಬೋಡಿಯಾ): ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ನಡೆಯುತ್ತಿರುವ ಭಾರಿ ಯುದ್ಧ ಸೋಮವಾರ ಎರಡನೇ ವಾರಕ್ಕೆ ಪ್ರವೇಶಿಸಿದೆ. ಗಡಿಯ ಅಪಾಯಕಾರಿ ಪ್ರದೇಶದಿಂದ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದ ತಾಣಗಳ ಮೇಲೆಯೂ ಥಾಯ್ಲೆಂಡ್ ತೀವ್ರ ಬಾಂಬ್ ದಾಳಿ ನಡೆಸುತ್ತಿದೆ ಎಂದು ಕಾಂಬೋಡಿಯಾ ಹೇಳಿದೆ.

‘ಒಡ್ಡರ್ ಮೀಂಚೆ ಪ್ರಾಂತ್ಯದ ಚೋಂಗ್ ಕಲ್ ಜಿಲ್ಲೆ ಮತ್ತು ಸೀಯೆಮ್ ರೀಪ್ ಪ್ರಾಂತ್ಯದ ಸ್ರೇಯಿ ಸ್ನಾಮ್ ಜಿಲ್ಲೆಯ ಗಡಿ ಪ್ರದೇಶಗಳಿಂದ ಸ್ಥಳಾಂತರಗೊಂಡ ಜನರ ನಿರಾಶ್ರಿತ ಶಿಬಿರಗಳ ಬಳಿ ಸೋಮವಾರ ಬೆಳಿಗ್ಗೆ 10 ಗಂಟೆಯ ನಂತರ ಥಾಯ್ನ ಎಫ್–16 ಯುದ್ಧವಿಮಾನಗಳು ಎರಡು ಬಾಂಬ್ಗಳನ್ನು ಹಾಕಿವೆ’ ಎಂದು ಕಾಂಬೋಡಿಯಾದ ರಕ್ಷಣಾ ಮತ್ತು ಮಾಹಿತಿ ಸಚಿವಾಲಯ ಮಾಹಿತಿ ನೀಡಿದೆ.

ಕಾಂಬೋಡಿಯಾ ಪ್ರದೇಶದ ಒಳಗೆ 70 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿರುವ ಸ್ರೇಯಿ ಸ್ನಾಮ್ನಲ್ಲಿ ನಡೆದ ಬಾಂಬ್ ದಾಳಿಯು ಸೇತುವೆಯನ್ನು ಗುರಿಯಾಗಿಸಿಕೊಂಡಿತ್ತು ಎಂದು ಕಾಂಬೋಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಈ ಬಗ್ಗೆ ಥಾಯ್ ಅಧಿಕಾರಿಗಳು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶತಮಾನಗಳಷ್ಟು ಹೆಳೆಯದಾದ ದೇವಾಲಯದ ಅವಶೇಷಗಳನ್ನು ಒಳಗೊಂಡಿರುವ ಗಡಿನಾಡಿನ ಭೂಮಿಯ ಬಗ್ಗೆ ಉಭಯ ದೇಶಗಳ ನಡುವೆ ದೀರ್ಘಕಾಲದಿಂದ ವಿವಾದವಿದ್ದು, ಅದರ ಸ್ವಾಧೀನಕ್ಕಾಗಿ ಸಂಘರ್ಷ ನಡೆಯುತ್ತಿದೆ. ಕಳೆದ ವಾರ ನಡೆದ ಸಂಘರ್ಷದ ಸಮಯದಲ್ಲಿ ಎರಡೂ ಕಡೆಯ ಎರಡು ಡಜನ್ಗೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ವರದಿಯಾಗಿದೆ. ಅಲ್ಲದೆ, 5 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.