ವಾಷಿಂಗ್ಟನ್/ ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಉತ್ಪನ್ನಗಳ ಮೇಲೆ ಸುಂಕ ವಿಧಿಸಿ ಆದೇಶಿಸಿದ ಬೆನ್ನಲ್ಲೇ ತಿರುಗೇಟು ನೀಡಿರುವ ಚೀನಾ, ಅಮೆರಿಕದ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿ ಆದೇಶ ಹೊರಡಿಸಿದೆ.

ಚೀನಾದಿಂದ ಆಮದಾಗುವ ಎಲ್ಲಾ ಉತ್ಪನ್ನಗಳ ಮೇಲೆ ಶೇ 10ರಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಚೀನಾ, ಅಮೆರಿಕದ ಕಲ್ಲಿದ್ದಲ್ಲು ಮತ್ತು ಎಲ್ಎನ್ಜಿ ಮೇಲೆ ಶೇ 15ರಷ್ಟು ಮತ್ತು ಕಚ್ಚಾತೈಲ, ಶಸ್ತ್ರಾಸ್ತ್ರ ಉಪಕರಣಗಳು ಸೇರಿ ಹಲವು ಉತ್ಪನ್ನಗಳ ಮೇಲೆ ಶೇ 10 ರಷ್ಟು ತೆರಿಗೆ ವಿಧಿಸುವುದಾಗಿ ಆದೇಶ ಹೊರಡಿಸಿದೆ.

ಈ ಹೊಸ ನೀತಿ ಫೆ.10ರಂದು ಜಾರಿಗೆ ಬರಲಿದೆ ಎಂದು ಚೀನಾ ಹಣಕಾಸು ಸಚಿವಾಲಯ ಹೇಳಿದೆ.
.ಅಮೆರಿಕದಿಂದ ಶೇ 10ರಷ್ಟು ಸುಂಕ: ಚೀನಾದಿಂದ ಪ್ರತ್ಯುತ್ತರ.
ಇದರ ಜತೆಗೆ ಅಮೆರಿಕದ ಬ್ರಾಂಡೆಡ್ ಬಟ್ಟೆಗಳ ಕಂಪನಿ ‘ಕೆಲ್ವಿನ್ ಕ್ಲೇನ್’ ಮತ್ತು ಅಮೆರಿಕದ ಜೈವಿಕ ತಂತ್ರಜ್ಞಾನ ಕಂಪನಿ ‘ಇಲ್ಯುಮಿನಾ’ವನ್ನು ವಿಶ್ವಾಸಾರ್ಹವಲ್ಲದ ಘಟಕಗಳ ಪಟ್ಟಿಗೆ ಸೇರಿಸುವುದಾಗಿ ಹೇಳಿದೆ.

ಅಲ್ಲದೆ ದೇಶದ ಭದ್ರತೆಯ ಸಲುವಾಗಿ ಟಂಗ್ಸ್ಟನ್, ಟೆಲೂರಿಯಮ್, ರುಥೇನಿಯಮ್, ಮಾಲಿಬ್ಡಿನಮ್ ಮತ್ತು ರುಥೇನಿಯಮ್ ಲೋಹಗಳ ಉತ್ಪನ್ನಗಳ ರಫ್ತಿನ ಮೇಲೆ ನಿಯಂತ್ರಣ ಹೇರಲಾಗುವುದು ಎಂದು ಚೀನಾ ಸಚಿವಾಲಯ ಹೇಳಿದೆ.
.ಚೀನಾದ ಸರಕುಗಳಿಗೆ ಶೇ 10ರಷ್ಟು ಹೆಚ್ಚುವರಿ ತೆರಿಗೆ: ಡೊನಾಲ್ಡ್ ಟ್ರಂಪ್ ಘೋಷಣೆ.ಮೆಕ್ಸಿಕೊ, ಕೆನಡಾ, ಚೀನಾಗೆ ತೆರಿಗೆ ವಿಧಿಸುವ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ.ಟ್ರಂಪ್ ತೆರಿಗೆ ಸವಾಲಿಗೆ ಕೆನಡಾ ತಿರುಗೇಟು: ಅಮೆರಿಕ ಸರಕುಗಳ ಮೇಲೆ ಶೇ 25 ಸುಂಕ.ಡಾಲರ್ ಬದಲಿಸಿದರೆ ಶೇ 100ರಷ್ಟು ತೆರಿಗೆ: BRICS ರಾಷ್ಟ್ರಗಳಿಗೆ ಟ್ರಂಪ್ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.