ವಾಷಿಂಗ್ಟನ್: ವ್ಯವಹಾರಗಳಲ್ಲಿ ಅಮೆರಿಕದ ಡಾಲರ್ ಬದಲು ಬೇರೆ ಕರೆನ್ಸಿ ಬಳಸಲು ಯತ್ನಿಸಿದರೆ ಶೇ 100ರಷ್ಟು ತೆರಿಗೆಯನ್ನು ವಿಧಿಸಲಾಗುವುದು ಎಂದು ಭಾರತವೂ ಇರುವ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಹಲವು ಆದೇಶ, ಬದಲಾವಣೆಗಳನ್ನು ಪ್ರಕಟಿಸಿದ ಟ್ರಂಪ್, ‘ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಂಡೊನೇಷ್ಯಾ, ಇರಾನ್ ಹಾಗೂ ಸಂಯುಕ್ತ ಅರಬ್ ರಾಷ್ಟ್ರಗಳನ್ನೊಳಗೊಂಡ ಬ್ರಿಕ್ಸ್ ರಾಷ್ಟ್ರಗಳು ವ್ಯವಹಾರಗಳಲ್ಲಿ ಕರೆನ್ಸಿಯಾಗಿ ಡಾಲರ್ ಬದಲಿಸುವುದಾದರೆ ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಅಮೆರಿಕದೊಂದಿಗೆ ಅವರು ಮಾಡುತ್ತಿರುವ ಎಲ್ಲಾ ವ್ಯವಹಾರಗಳ ಮೇಲೆ ಕನಿಷ್ಠ ಶೇ 100ರಷ್ಟು ತೆರಿಗೆ ವಿಧಿಸಲಾಗುವುದು. ನಿರ್ಧಾರ ಪ್ರಕಟಿಸುವುದಿರಲಿ, ಚಿಂತನೆ ನಡೆಸಿದರೂ ಶೇ 100ರಷ್ಟು ತೆರಿಗೆ ವಿಧಿಸುವುದು ಖಂಡಿತಾ’ ಎಂದಿದ್ದಾರೆ.

ಬ್ರಿಕ್ಸ್ ರಾಷ್ಟ್ರಗಳ ಇಂಥದ್ದೊಂದು ನಿರ್ಧಾರದ ವಿರುದ್ಧ ಕಳೆದ ಡಿಸೆಂಬರ್ನಲ್ಲಿ ಟ್ರಂಪ್ ಗುಡುಗಿದ್ದರು.
.ಟ್ರಂಪ್ ಎರಡನೇ ಅವಧಿ ಶುರು: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ.Trump 2.0: USಗೆ ಕೆನಡಾ ಸೇರಿಸುವೆ ಎಂದ ಟ್ರಂಪ್ ಪದಗ್ರಹಣಕ್ಕೆ ವೇದಿಕೆ ಸಜ್ಜು.
‘ಬ್ರಿಕ್ಸ್ ರಾಷ್ಟ್ರಗಳು ತಮ್ಮದೇ ಆದ ಹೊಸ ಕರೆನ್ಸಿಯನ್ನು ಹುಟ್ಟುಹಾಕುವಂತಿಲ್ಲ. ಜತೆಗೆ, ಪ್ರಬಲ ಅಮೆರಿಕನ್ ಡಾಲರ್ ಬದಲಿಸಲು ಚಿಂತನೆಯನ್ನೂ ನಡೆಸುವಂತಿಲ್ಲ. ಇಂಥದ್ದೊಂದು ಬದ್ಧತೆಯನ್ನು ಈ ರಾಷ್ಟ್ರಗಳು ಪ್ರದರ್ಶಿಸಬೇಕಿದೆ. ಇಲ್ಲವಾದಲ್ಲಿ ಅಮೆರಿಕದ ಆರ್ಥಿಕತೆಯಲ್ಲಿ ಪಾಲ್ಗೊಳ್ಳುವ ಉತ್ಸಾಹವನ್ನು ಕೈಬಿಡಬೇಕಿದೆ. ವ್ಯವಹಾರವನ್ನು ಬಯಸಿದ್ದೇ ಆದಲ್ಲಿ ಶೇ 100ರಷ್ಟು ತೆರಿಗೆ ಭರಿಸಬೇಕಾದ್ದು ಕಡ್ಡಾಯವಾಗಲಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಕಳೆದ ಡಿಸೆಂಬರ್ನಲ್ಲಿ ವಿಷಯ ಸ್ಪಷ್ಟಪಡಿಸಿದ್ದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘ಡಾಲರ್ ನಿರ್ಲಕ್ಷಿಸುವ ಅಥವಾ ಕೈಬಿಡುವ ಹಾಗೂ ಬ್ರಿಕ್ಸ್ ರಾಷ್ಟ್ರಗಳ ಹೊಸ ಕರೆನ್ಸಿ ಸೃಷ್ಟಿಸುವ ಯಾವುದೇ ಪ್ರಸ್ತಾವ ನಮ್ಮ ಮುಂದಿಲ್ಲ’ ಎಂದಿದ್ದರು.

ವಲಸೆ ನೀತಿ ಕುರಿತು ಮಾತನಾಡಿರುವ ಟ್ರಂಪ್, ‘ಕಾನೂನಿನ್ವಯ ವಲಸೆ ಬಂದಲ್ಲಿ ಅವುಗಳ ವಿರುದ್ಧ ಯಾವುದೇ ಕ್ರಮವಿಲ್ಲ. ತಯಾರಿಕಾ ವಲಯವು ಇನ್ನಷ್ಟು ವೃದ್ಧಿಸಲಿದೆ. ಹೀಗಾಗಿ ಕ್ರಮಬದ್ಧವಾಗಿ ಅಮೆರಿಕಕ್ಕೆ ಬರಲಿಚ್ಛಿಸುವವರಿಗೆ ಸ್ವಾಗತವಿದೆ’ ಎಂದಿದ್ದಾರೆ.
.Trump oath ceremony: ಮಿಂಚಿದ ಅಮೆರಿಕದ ‘ಸೆಕೆಂಡ್ ಲೇಡಿ’ ಉಷಾ ಚಿಲುಕುರಿ!.ಅಮೆರಿಕದಲ್ಲಿರುವುದು ‘ಗಂಡು ಮತ್ತು ಹೆಣ್ಣು’ ಎರಡೇ ಲಿಂಗ: ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.