ಒಟ್ಟಾವ: ತನ್ನ ಉತ್ಪನ್ನಗಳಿಗೆ ತೆರಿಗೆ ವಿಧಿಸಿದ ಅಮೆರಿಕಕ್ಕೆ ಕೆನಡಾ ತಿರುಗೇಟು ನೀಡಿದೆ. ಅಮೆರಿಕದ ಆಯ್ದ ಸರಕುಗಳ ಮೇಲೆ ಶೇ 25 ತೆರಿಗೆ ವಿಧಿಸುತ್ತೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

‘ಅಮೆರಿಕದ ವ್ಯಾಪಾರ ಕ್ರಮಕ್ಕೆ ನಾವು ಪ್ರತ್ಯುತ್ತರ ನೀಡುತ್ತಿದ್ದೇವೆ. $ 106 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳು ಶೇ 25 ರಷ್ಟು ತೆರಿಗೆ ವಿಧಿಸುತ್ತಿದ್ದೇವೆ’ ಎಂದು ಟ್ರುಡೊ ಘೋಷಿಸಿದ್ದಾರೆ. ಇದು ಅಮೆರಿಕ–ಕೆನಡಾ ನಡುವಿನ ದೀರ್ಘ ವ್ಯಾಪಾರ ಸಂಬಂಧಕ್ಕೆ ಹುಳಿ ಹಿಂಡಿದೆ.
.ಮೆಕ್ಸಿಕೊ, ಕೆನಡಾ, ಚೀನಾಗೆ ತೆರಿಗೆ ವಿಧಿಸುವ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ.
ಮೊದಲಿಗೆ 30 ಬಿಲಿಯನ್ ಕೆನಡಾ ಡಾಲರ್ ಮೌಲ್ಯದ ಅಮೆರಿಕ ಉತ್ಪನ್ನಗಳಿಗೆ ತೆರಿಗೆ ವಿಧಿಸಲಾಗುವುದು. ಇದು ಮಂಗಳವಾರದಿಂದೇ ಜಾರಿಗೆ ಬರಲಿದೆ. ಮೂರು ವಾರಗಳ ಬಳಿಕ 125 ಕೆನಡಾ ಡಾಲರ್ ಮೌಲ್ಯದ ಸರಕುಗಳಿಗೆ ಈ ಹೆಚ್ಚಿನ ಸುಂಕ ಅನ್ವಯವಾಗಲಿದೆ.

‘ನಾವು ಇದನ್ನು ಇನ್ನಷ್ಟು ಉಲ್ಬಣಗೊಳಿಸಲು ಬಯಸುವುದಿಲ್ಲ. ನಾವು ಕೆನಡಾಗಾಗಿ, ಕೆನಡಾದ ಜನರಿಗಾಗಿ ಹಾಗೂ ಕೆನಡಾದ ಉದ್ಯೋಗದ ಪರವಾಗಿ ನಿಲ್ಲುತ್ತೇವೆ’ ಎಂದು ಟ್ರುಡೊ ಹೇಳಿದ್ದಾರೆ.

ಈ ಹೊಸ ಸುಂಕ ಅಮೆರಿಕದ ಬಿಯರ್, ವೈನ್, ಹಣ್ಣು, ತರಕಾರಿ, ಪ್ಲಾಸ್ಟಿಕ್ ಸೇರಿ ಹಲವು ಉತ್ಪನ್ನಗಳಿಗೆ ಅನ್ವಯವಾಗಲಿದೆ ಎಂದು ಟ್ರುಡೊ ತಿಳಿಸಿದ್ದಾರೆ.
.ಡಾಲರ್ಗೆ ಪರ್ಯಾಯ: ಶೇ 100ರಷ್ಟು ಸುಂಕ ಎದುರಿಸಿ: ಬ್ರಿಕ್ಸ್ ದೇಶಗಳಿಗೆ ಟ್ರಂಪ್.
ವ್ಯಾಪಾರ ಯುದ್ಧದ ಪರಿಣಾಮ ಅಮೆರಿಕದ ಮೇಲೆ ಬೀಳಲಿದೆ. ಅಲ್ಲಿ ಉದ್ಯೋಗ ನಷ್ಟ, ಆಹಾರ ಹಣದುಬ್ಬರ, ಅಟೊಮೊಬೈಲ್, ಪೊಟಾಷ್, ಯುರೇನಿಯಂ, ಸ್ಟೀಲ್ ಸೇರಿ ಹಲವು ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಟ್ರೊಡೊ ಹೇಳಿದ್ದಾರೆ.

ಟ್ರುಡೊ ಘೋಷಣೆಗೂ ಮುನ್ನ ಕೆನಡಾ, ಮೆಕ್ಸಿಕೊ ಹಾಗೂ ಚೀನಾದ ಉತ್ಪನ್ನಗಳಿಗೆ ತೆರಿಗೆ ವಿಧಿಸುವ ಘೋಷಣೆಗೆ ಟ್ರಂಪ್ ಸಹಿ ಹಾಕಿದ್ದರು.

ಕೆನಡಾ ಹಾಗೂ ಮೆಕ್ಸಿಕೊದ ಎಲ್ಲಾ ಬಗೆ ಉತ್ಪನ್ನಗಳ ಮೇಲೆ ಶೇ 25 ರಷ್ಟು ತೆರಿಗೆ ಹೇರಲಾಗಿದೆ. ಕೆನಡಾದ ಇಂಧನ ಹಾಗೂ ತೈಲ ಉತ್ಪನ್ನಗಳ ಮೇಲೆ ಶೇ 10 ಸುಂಕ ವಿಧಿಸಲಾಗಿದೆ. ಚೀನಾದ ಉತ್ಪನ್ನಗಳ ಮೇಲೆ ಶೇ 10ರಷ್ಟು ಸುಂಕ ಹೇರುವ ಆದೇಶದಕ್ಕೆ ಟ್ರಂಪ್ ಸಹಿ ಬಿದ್ದಿದೆ.
.ಟ್ರಂಪ್ ‘ಅಮೆರಿಕದ ರಾಷ್ಟ್ರೀಯವಾದಿ’: ಜೈಶಂಕರ್ ಬಣ್ಣನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.