ಬೀಜಿಂಗ್: ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾನುವಾರ ಯೋಗ ಅಭ್ಯಾಸವನ್ನು ಆಯೋಜಿಸಲಾಗಿತ್ತು. ಇದರಲ್ಲಿ 100ಕ್ಕೂ ಹೆಚ್ಚು ಚೀನಾದ ಯೋಗ ಉತ್ಸಾಹಿಗಳು ಭಾಗವಹಿಸಿದ್ದರು.

ಚೀನಾದಲ್ಲಿ ಯೋಗವು ಜನಪ್ರಿಯತೆಯನ್ನು ಪಡೆದಿದೆ. 2014ರ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತು. ಈ ಬಳಿಕದಿಂದ ಚೀನಾದಲ್ಲಿ ಯೋಗಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಈ ಯೋಗ ಅಭ್ಯಾಸದಲ್ಲಿ ಚೀನಾದಲ್ಲಿನ ಭಾರತದ ರಾಯಭಾರಿ ವಿಕ್ರಂ ಮಿಸ್ರಿ ಮತ್ತು ಉಪ ರಾಯಭಾರಿ ಡಾ.ಅಕ್ವಿನೊ ವಿಮಲ್ ಅವರು ಕೂಡ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಮಿಸ್ರಿ,‘ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ನಿರಂತರ ಯೋಗ ಅಭ್ಯಾಸವು ದೈಹಿಕ ಮತ್ತು ಆಧ್ಯಾತ್ಮಿಕ ಮಾರ್ಗವನ್ನು ಒದಗಿಸುತ್ತದೆ’ ಎಂದು ಹೇಳಿದರು.

ಈ ಯೋಗ ಅಭ್ಯಾಸವು ಒಂದು ಗಂಟೆ ಕಾಲ ನಡೆದಿದ್ದು, ಇದರಲ್ಲಿ ಚೀನಾದ ಯೋಗಿ ಯೋಗ ಶಾಲೆಯ ಚೀನಾದ ಯೋಗ ಶಿಕ್ಷಕರು ಹಾಗೂ ಸ್ಥಾಪಕ ಮೋಹನ್ ಭಂಡಾರಿ ಅವರು ಭಾಗವಹಿಸಿದ್ದರು.

ಅಂತರರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಚೀನಾದಲ್ಲಿ ವಿವಿಧ ಯೋಗ ಸಂಘಗಳು ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.