ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌ ಪರ ಪ್ರತಿಭಟನೆ; ವಿ.ವಿಗಳಲ್ಲಿ ಘರ್ಷಣೆ

Published 1 ಮೇ 2024, 13:50 IST
Last Updated 1 ಮೇ 2024, 13:50 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌: ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲೀಸ್‌ ಕ್ಯಾಂಪಸ್‌ನಲ್ಲಿ ಪ್ಯಾಲೆಸ್ಟೀನ್‌ ಪರ ಪ್ರತಿಭಟನೆಯಿಂದಾಗಿ ಬುಧವಾರ ಘರ್ಷಣೆ ಏರ್ಪಟ್ಟಿತ್ತು.  

ಪ್ಯಾಲೆಸ್ಟೀನ್‌ ಪರ ಮತ್ತು ಇಸ್ರೇಲ್‌ ಪರ ಗುಂಪಿನ ಮಧ್ಯೆ ಘರ್ಷಣೆ ನಡೆದಿದೆ ಎಂದು ‘ಸಿಎನ್‌ಎನ್‌’ ವರದಿ ಮಾಡಿದೆ. 

‘ವಿಶ್ವವಿದ್ಯಾಲಯದ ಮನವಿಯ ಮೇರೆಗೆ ಕ್ಯಾಂಪಸ್‌ನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಉದ್ರಿಕ್ತ ಗುಂಪುಗಳನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ’ ಎಂದು ಲಾಸ್‌ ಏಂಜಲೀಸ್ ಪೊಲೀಸರು ‘ಎಕ್ಸ್‌’ ಮೂಲಕ ತಿಳಿಸಿದ್ದಾರೆ.

ಪರ–ವಿರೋಧಿ ಪ್ರತಿಭಟನಕಾರರು ಬಡಿಗೆ ಮೂಲಕ ಪರಸ್ಪರ ಹೊಡೆದಾಡಿಕೊಂಡ ದೃಶ್ಯ ಟಿ.ವಿಯಲ್ಲಿ ಬಿತ್ತರವಾಗಿದೆ.

ಇನ್ನೊಂದೆಡೆ ಪಟಾಕಿ ಸಿಡಿಸುವ ಮತ್ತು ವಸ್ತುಗಳನ್ನು ಪರಸ್ಪರರ ವಿರುದ್ಧ ಎಸೆದ, ಬ್ಯಾರಿಕೇಡ್‌ಗಳನ್ನು ತಳ್ಳಿದ ದೃಶ್ಯಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT