ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿಗೀಡಾಗುತ್ತಿರುವವರ ಮತ್ತು ಸಾವಿಗೀಡಾಗುತ್ತಿರುವವರ ಸಂಖ್ಯೆ ಅಮೆರಿಕದಲ್ಲಿ ದಿನೇದಿನೇ ಹೆಚ್ಚಾಗುತ್ತಿದೆ. ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಶನಿವಾರ ರಾತ್ರಿ 96,125 ತಲುಪಿದೆ. ಒಟ್ಟಾರೆಯಾಗಿ 16.04 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

ಜಾನ್ಸ್ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 52.52 ಲಕ್ಷ ದಾಟಿದೆ. ಈವರೆಗೆ 339,026 ಜನ ಮೃತಪಟ್ಟಿದ್ದಾರೆ.

ಈವರೆಗೆ ರಷ್ಯಾದಲ್ಲಿ 3.35 ಲಕ್ಷ, ಬ್ರೆಜಿಲ್‌ನಲ್ಲಿ 3.30 ಲಕ್ಷ ಹಾಗೂ ಬ್ರಿಟನ್‌ನಲ್ಲಿ 2.55 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ದೇಶಗಳಲ್ಲಿ ಕ್ರಮವಾಗಿ 3,388 ಹಾಗೂ21,048 ಮತ್ತು 36,475 ಜನ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ರಷ್ಯಾ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಬ್ರೆಜಿಲ್

ಸ್ಪೇನ್‌ನಲ್ಲಿ28,628, ಇಟಲಿಯಲ್ಲಿ 32,616 ಹಾಗೂ ಫ್ರಾನ್ಸ್‌ನಲ್ಲಿ ಈವರೆಗೆ 28,218 ಜನ ಮೃತಪಟ್ಟಿದ್ದಾರೆ.

ಚೀನಾದಲ್ಲಿ ಹೊಸ ಪ್ರಕರಣ ಇಲ್ಲ: ಕೊರೊನಾ ವೈರಸ್ ಮೊದಲು ಕಂಡುಬಂದಿದ್ದ ಚೀನಾದಲ್ಲಿ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ ಒಂದೂ ಹೊಸ ಪ್ರಕರಣ ದಾಖಲಾಗಿಲ್ಲ ಎಂದು ಅಲ್ ಜಜೀರಾ ಜಾಲತಾಣ ವರದಿ ಮಾಡಿದೆ. ಚೀನಾದಲ್ಲಿ ಈವರೆಗೆ 84,081 ಜನರಿಗೆ ಸೋಂಕು ತಗುಲಿದ್ದು, 4,638 ಜನ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.