ಇಸ್ಲಾಮಾಬಾದ್: ಕೋವಿಡ್-19 ದೃಢಪಟ್ಟಿರುವುದರಿಂದ ಪ್ರತ್ಯೇಕವಾಸದಲ್ಲಿ ಉಳಿದು ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು,ತಾವು ಗುಣಮುಖರಾಗಲಿ ಎಂದುಹಾರೈಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವಇಮ್ರಾನ್, ʼನಾನು ಮತ್ತು ದೇಶದ ಪ್ರಥಮ ಮಹಿಳೆ, ಕೋವಿಡ್-19ನಿಂದ ಚೇತರಿಸಿಕೊಳ್ಳಲೆಂದು ಪಾಕಿಸ್ತಾನ ಹಾಗೂ ವಿದೇಶಗಳಿಂದಶುಭಾಶಯ ಕೋರಿದ, ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆʼ ಎಂದು ತಿಳಿಸಿದ್ದಾರೆ.

ಇಮ್ರಾನ್‌ಖಾನ್‌ಅವರು ಬೇಗನೆ ಗುಣಮುಖರಾಗಲಿ ಎಂದುಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶುಭಾಶಯ ಕೋರಿದ್ದರು.

ಚೀನಾ ಅಭಿವೃದ್ಧಿಪಡಿಸಿರುವ ಸಿನೋಫಾರ್ಮ್ ಲಸಿಕೆಯ ಮೊದಲ ಡೋಸ್ ಪಡೆದ ಎರಡು ದಿನಗಳ ಬಳಿಕ (ಶನಿವಾರ)ಇಮ್ರಾನ್ ಅವರಿಗೆ ಕೋವಿಡ್ ದೃಢಪಟ್ಟಿತ್ತು.ಇಮ್ರಾನ್ ಅವರ ಪತ್ನಿಬುಷ್ರಾ ಬಿದಿ ಅವರಿಗೂ ಕೋವಿಡ್ ದೃಢಪಟ್ಟಿದೆ.

ಪಾಕಿಸ್ತಾನದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ13,843ಕ್ಕೆ ತಲುಪಿದೆ. ಭಾನುವಾರ ಹೊಸದಾಗಿ3,677 ಜನರಿಗೆ ಸೋಂಕುತಗುಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.