ಲಂಡನ್/ವಾಷಿಂಗ್ಟನ್: ಬ್ರಿಟನ್ ಮತ್ತು ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಮತ್ತೆ ತೀವ್ರಗೊಂಡಿದೆ. ಬ್ರಿಟನ್‌ನಲ್ಲಿ ಒಂದೇ ದಿನ 19,875 ಪ್ರಕರಣಗಳು ದೃಢಪಟ್ಟಿದ್ದು, 341 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ ಬ್ರಿಟನ್‌ನಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 14.93 ಲಕ್ಷ ದಾಟಿದ್ದು, 54,626 ಮಂದಿ ಸಾವಿಗೀಡಾಗಿದ್ದಾರೆ.

ಮತ್ತೊಂದೆಡೆ ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಸೋಂಕಿತರಾಗುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಒಂದೇ ದಿನ 1,62,660 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,430 ಜನ ಅಸುನೀಗಿದ್ದಾರೆ. ಅಲ್ಲಿ ಈವರೆಗೆ 1.24 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 2.61 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಿದೆ. 74 ಲಕ್ಷಕ್ಕೂ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೋವಿಡ್–19: ಅಮೆರಿಕದಲ್ಲಿ ದಿನವೊಂದರ ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆ

ಬ್ರೆಜಿಲ್‌ನಲ್ಲಿ 32,622 ಹೊಸ ಪ್ರಕರಣ 354 ಸಾವು, ಜರ್ಮನಿಯಲ್ಲಿ 16,612 ಹೊಸ ಪ್ರಕರಣ 163 ಸಾವು, ಫ್ರಾನ್ಸ್‌ನಲ್ಲಿ 17,881 ಹೊಸ ಪ್ರಕರಣ 253 ಸಾವು, ಇಟಲಿಯಲ್ಲಿ 34,767 ಹೊಸ ಪ್ರಕರಣ 692 ಸಾವು ಸಂಭವಿಸಿದೆ.

ಅತಿಹೆಚ್ಚು ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದು, ಭಾರತ, ಬ್ರೆಜಿಲ್, ಫ್ರಾನ್ಸ್ ಮತ್ತು ರಷ್ಯಾ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಭಾರತದಲ್ಲಿ 4,42,606, ಬ್ರೆಜಿಲ್‌ನಲ್ಲಿ 4,54,612, ಫ್ರಾನ್ಸ್‌ನಲ್ಲಿ 19,29,012, ರಷ್ಯಾದಲ್ಲಿ 4,51,535 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.