ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ | ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಓಡಿ ಹೋದ ಫೈಜರ್ ಸಿಇಒ

Last Updated 20 ಜನವರಿ 2023, 9:50 IST
ಅಕ್ಷರ ಗಾತ್ರ

ದಾವೋಸ್ (ಸ್ವಿಟ್ಜರ್ಲೆಂಡ್): ಪತ್ರಕರ್ತರೊಬ್ಬರು ಕೋವಿಡ್ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಫೈಜರ್‌ ಫಾರ್ಮಾ ಕಂಪನಿಯ ಸಿಇಒ ಆಲ್ಬರ್ಟ್‌ ಬೌರ್ಲಾ ಓಡಿ ಹೋಗಿದ್ದಾರೆ.

‘ರೆಬೆಲ್ ನ್ಯೂಸ್’ ವಾಹಿನಿಯ ಪತ್ರಕರ್ತರೊಬ್ಬರು ಆಲ್ಬರ್ಟ್‌ ಬೌರ್ಲಾ ಅವರನ್ನು ‘ಫೈಜರ್ ಕೋವಿಡ್ ಲಸಿಕೆಯ ಸುರಕ್ಷತೆ, ಪರಿಣಾಮಕಾರಿತ್ವ ಹಾಗೂ ಸೋಂಕು ಹರಡುವುದನ್ನು ತಡೆಯುವಲ್ಲಿ ಫೈಜರ್ ಲಸಿಕೆ ವಿಫಲವಾಗಿದೆ ಎಂಬ ಅಂಶವನ್ನು ಏಕೆ ರಹಸ್ಯವಾಗಿಟ್ಟಿದ್ದೀರಿ’ ಎಂದು ಪ್ರಶ್ನಿಸಿದ್ದರು.

ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಆಲ್ಬರ್ಟ್‌ ಬೌರ್ಲಾ, ‘ತುಂಬಾ ಧನ್ಯವಾದಗಳು ಮತ್ತು ‘ಹ್ಯಾವ್ ಎ ನೈಸ್ ಡೇ’ ಎಂದಷ್ಟೆ ಉತ್ತರಿಸಿದ್ದಾರೆ. ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ನೀವು ಆರಂಭದಲ್ಲಿ ಫೈಜರ್ ಲಸಿಕೆ ಶೇ 100 ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದೀರಿ. ನಂತರ ಶೇ 90, ಶೇ 80, ಶೇ 70 ಎಂದು ಹೇಳಿದ್ದೀರಿ. ಆದರೆ, ಲಸಿಕೆಗಳು ಸೋಂಕು ಹರಡುವುದನ್ನು ತಡೆಯುವುದಿಲ್ಲ ಎಂದು ನಮಗೆ ತಿಳಿದಿದೆ. ಲಸಿಕೆಯ ಪರಿಣಾಮಕಾರಿತ್ವ ಕುರಿತಾದ ಅಂಕಿಅಂಶಗಳನ್ನು ಬಹಿರಂಗಪಡಿಸದೆ ಗೌಪ್ಯತೆ ಕಾಪಾಡಿಕೊಂಡಿದ್ದು ಯಾಕೆ? ಎಂದು ಆಲ್ಬರ್ಟ್‌ ಬೌರ್ಲಾ ಅವರನ್ನು ಪತ್ರಕರ್ತ ಪ್ರಶ್ನಿಸಿದ್ದರು.

ಮುಂದುವರಿದು ‘ವಿಶ್ವದ ಎದುರು ಕ್ಷಮೆಯಾಚಿಸುವ ಸಮಯ ಬಂದಿದೆಯೇ ಅಥವಾ ಲಸಿಕೆಗಳನ್ನು ಖರೀದಿಸಿದ ದೇಶಗಳಲ್ಲಿ ಫಲಿತಾಂಶ ಕಂಡು ಬರದೆ ಇದ್ದರೆ ಅಂತಹ ದೇಶಗಳಿಗೆ ಹಣ ಮರುಪಾವತಿ ಮಾಡುವೀರಾ’ ಎಂದು ಪತ್ರಕರ್ತ ಪ್ರಶ್ನಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT